Wednesday, January 22, 2025
ಸುದ್ದಿ

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಮಹಿಳೆಗೆ ಕೊರೊನಾ ದೃಢ ಹಿನ್ನಲೆ : ಶಿರ್ಲಾಲು ಪ್ರದೇಶದ ಏಳು ಮನೆಗಳು ಕಂಟೈನ್ಮೆಂಟ್ ವಲಯ – ಸ್ಥಳಕ್ಕೆ ಶಾಸಕ ಹರೀಶ್ ಪೂಂಜ, ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ – ಕಹಳೆ ನ್ಯೂಸ್

ಬೆಳ್ತಂಗಡಿ: ತಾಲೂಕಿನ ಶಿರ್ಲಾಲು ನಿವಾಸಿಯಾದ 38 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ -19 ಸೋಂಕು ಶಂಕೆ ಹಿನ್ನೆಲೆಯಲ್ಲಿ ಶಿರ್ಲಾಲಿನ ಮಜಲುಪಲ್ಕೆ ಪ್ರದೇಶದ ಏಳು ಮನೆಗಳನ್ನು ಕಂಟೈನ್ಮೆಂಟ್ ವಲಯವೆಂದು ಗುರುತಿಸಲಾಗಿದೆ.

ಮಹಿಳೆಯು ಶಿರ್ಲಾಲಿನ ಮಜಲುಪಲ್ಕೆಯಿಂದ ಕನ್ಯಾಡಿ-1 ಪಡ್ಪು ಎಂಬಲ್ಲಿಯ ಅವರ ಸಂಬಂಧಿಕರ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ಸ್ಥಳೀಯರು ತಾಲೂಕು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಆರೋಗ್ಯ ಇಲಾಖೆ ಸಿಬ್ಬಂದಿ ಆ ಮನೆಯ ಎಲ್ಲರನ್ನೂ ಕೂಡ ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆಗೆ ಕೋವಿಡ್ -19 ಸೋಂಕಿನ ಲಕ್ಷಣಗಳ ಶಂಕೆ ವ್ಯಕ್ತವಾದ್ದರಿಂದ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಶಾಸಕ ಹರೀಶ್ ಪೂಂಜ, ತಹಶೀಲ್ದಾರ್, ಆರೋಗ್ಯಾಧಿಕಾರಿ ಡಾ.ಕಲಾಮಧು, ಅಳದಂಗಡಿ ಆಸ್ಪತ್ರೆ ವೈದ್ಯೆ ಡಾ.ಚೈತ್ರಾ, ವೇಣೂರು ಎಸ್ ಐ ಲೋಲಾಕ್ಷ, ಎಎಸ್ ಐ ಜಯಪೂಜಾರಿ ಪೊಲೀಸ್ ಸಿಬ್ಬಂದಿ ಕೃಷ್ಣ ಸ್ಥಳಕ್ಕೆ ತಾ.ಪಂ. ಸದಸ್ಯ ಜಯಶೀಲಾ, ಪಿಡಿಒ ರಾಜು, ಗಣಪತಿ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು ಆಗಮಿಸಿ ಪರಿಶೀಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು