Wednesday, January 22, 2025
ಸುದ್ದಿ

Breaking News : ಉಡುಪಿಯಲ್ಲಿ ಮೂರು ಪೊಲೀಸ್ ಠಾಣೆಗಳು ಸಿಲ್ ಡೌನ್ : ಅಜೆಕಾರಿನಲ್ಲಿ ಓರ್ವ ಎಎಸ್ ಐ, ಕಾರ್ಕಳದಲ್ಲಿ ಒಬ್ಬ ಕಾನ್ಸ್ ಟೇಬಲ್ ಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್

ಕಾರ್ಕಳ : ಕೊರೊನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಮಹಾಮಾರಿ ಆತಂಕವನ್ನು ತಂದೊಡ್ಡುತ್ತಿದೆ. ಇಷ್ಟು ದಿನ ಮುಂಬೈ, ದುಬೈನಿಂದ ಬಂದಿದ್ದವರಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ರೆ, ಇದೀಗ ಓರ್ವ ಎಎಸ್ ಐ ಹಾಗೂ ಪೊಲೀಸ್ ಪೇದೆಯೋರ್ವರಿಗೆ ಕೊರೊನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದೀಗ ಪೊಲೀಸರಿಗೂ ಕೊರೊನಾ ಆತಂಕ ತಂದೊಡ್ಡಿದ್ದು, ಮೂರು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿಗ ಕೊರೊನಾ ಬಿಗ್ ಶಾಕ್ ಕೊಟ್ಟಿದೆ. ಕ್ವಾರಂಟೈನ್ ನಲ್ಲಿದ್ದವರ ರಕ್ಷಣೆಗಿದ್ದ ಪೊಲೀಸರಿಗೆ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಜೆಕಾರು ಠಾಣೆಯ ಎಎಸ್ ಐ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದ್ರೀಗ ಅಂತಿಮ ವರದಿಗಾಗಿ ಕಾಯಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು