ಮೇ25 ರಿಂದ ಮೇ 31ರ ವರೆಗೆ ಪ್ರತಿ ದಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಾರಥ್ಯದಲ್ಲಿ ತೆಂಕು ಬಡಗಿನ ಕಲಾದಿಗ್ಗಜರ ಸಹಕಾರದೊಂದಿಗೆ ” ತಾಳಮದ್ದಲೆ ಸಪ್ತಾಹ ” ನೇರಪ್ರಸಾರ ; ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಂದ ನಾಳೆ ಚಾಲನೆ – ಕಹಳೆ ನ್ಯೂಸ್
ಮಂಗಳೂರು : ಕೊರೊನಾ ವೈರಸ್ ನಿಂದ ಹತಾಶೆಗೊಂಡಿದ್ದ ಯಕ್ಷಗಾನ ಕಲಾಭಿಮಾನಿಗಳಿಗೆ ರಸದೌತಣ. ಲಾಕ್ ಡೌನ್ ಸಂಧರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ತೆಂಕು ಬಡಗಿನ ಕಲಾದಿಗ್ಗಜರ ಸಹಕಾರದೊಂದಿಗೆ ” ತಾಳಮದ್ದಲೆ ಸಪ್ತಾಹ ” ನೇರಪ್ರಸಾರ ನಡೆಯಲಿದೆ.
ಮೇ 25 ರಿಂದ ಮೇ 31ರ ವರೆಗೆ ಪ್ರತಿ ದಿನ ಸಂಜೆ 4 ಗಂಟೆಯಿಂದ ವಿವಿಧ ಆಯ್ದ ಪ್ರಸಂಗಗಳ ತಾಳಮದ್ದಳೆ ನಡೆಯಲುದ್ದು, ಯುಟೂಬ್ ನಲ್ಲಿ ನೇರಪ್ರಸಾರವಾಗಲಿದೆ.
ಲೈವ್ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆ :
ನಾಳೆ ಸಂಜೆ 3.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದಾರೆ. ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.