Wednesday, January 22, 2025
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯ ಮೂರು, ಉಡುಪಿಯಲ್ಲಿ ಮೂರು ಮಂದಿಗೆ ಇಂದು ಕೊರೋನಾ ‌ಪಾಸಿಟಿವ್ ; ರಾಜ್ಯದಲ್ಲಿ ಒಟ್ಟು 100 ಮಂದಿಗೆ ಇಂದು ಸೋಂಕು‌ ದೃಢ – ಕಹಳೆ ನ್ಯೂಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಮತ್ತೆ ಸೆಂಚುರಿ ಬಾರಿಸಿದೆ. ಚಿತ್ರದುರ್ಗ ಜಿಲ್ಲೆಗೆ ಕೊರೊನಾ ಶಾಕ್ ಕೊಟ್ಟಿದ್ದು, ಇಂದು ಒಂದೇ ದಿನ 20 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಮೂರು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 20 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದರೆ, ಯಾದಗಿರಿ 14, ಬಳ್ಳಾರಿ 13, ಹಾಸನ 12, ದಾವಣಗೆರೆ 10, ಬೀದರ್ 10, ದಕ್ಷಿಣ ಕನ್ನಡ 3, ವಿಜಯಪುರ 5, ಉತ್ತರ ಕನ್ನಡ 3, ಉಡುಪಿ 3, ಕೋಲಾರ 2 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು