Wednesday, January 22, 2025
ಸಿನಿಮಾಸುದ್ದಿ

” ಗ್ಲಾಮರ್ ಹುಡುಗಿಯ ಇನ್ನೊಂದು ಮುಖ ” – ಪ್ರಣೀತಾ ಸುಭಾಷ್ ಮಾಡುತ್ತಿರೋ ಸೇವಾಕಾರ್ಯ ನೋಡಿದ್ರೆ ನೀವು ಶರಣಾಗ್ತೀರಾ..! – ಕಹಳೆ ನ್ಯೂಸ್

ಬೆಂಗಳೂರು: ಲಾಕ್​ಡೌನ್ ಶುರುವಾದ ಮೇಲೆ ಅದೆಷ್ಟೋ ಹೀರೋಯಿನ್​ಗಳು ಸುದ್ದಿಯಲ್ಲೇ ಇಲ್ಲ. ಆದರೆ, ಪ್ರಣೀತಾ ಸುಭಾಷ್ ಮಾತ್ರ ಕೊಂಚ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲಾಕ್​ಡೌನ್ ಶುರುವಾದ ಮೊದಲದಿನದಿಂದ ಇಲ್ಲಿಯವರೆಗೂ ರಸ್ತೆಗಿಳಿದು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಣ ನೀಡುವುದರೊಂದಿಗೆ ಶುರುವಾಗಿದ್ದ ಅವರ ಕೆಲಸ ಇದೀಗ, ಆಟೋ ಚಾಲಕರಿಗೆ ನೆರವಾಗುವ ಮೂಲಕ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರೌಡ್ ಫಂಡಿಂಗ್​ನಿಂದ 10 ಲಕ್ಷ: ಆರಂಭದಲ್ಲಿ ಪ್ರಣೀತಾ ಫೌಂಡೇಷನ್ ವತಿಯಿಂದ ಸಿನಿಮಾ ಕಾರ್ವಿುಕರಿಗೆ ಒಂದು ಲಕ್ಷ ದೇಣಿಗೆ ನೀಡಿದ್ದ ಪ್ರಣೀತಾ, ಬಳಿಕ ಮತ್ತಷ್ಟು ಹಣ ಸಂಗ್ರಹಣೆಗೆ ಕ್ರೌಡ್ ಫಂಡಿಂಗ್​ಗೆ ಮನವಿ ಮಾಡಿದ್ದರು. ಆಸಕ್ತ ದಾನಿಗಳು ಕೈಲಾದಷ್ಟು ಹಣದ ನೆರವು ನೀಡಿದ್ದರು. ಕೆಲವೇ ದಿನಗಳಲ್ಲಿ 10 ಲಕ್ಷ ಸಂಗ್ರಹ ಮಾಡಿ ಆರ್ಥಿಕ ಸ್ಥಿತಿಗತಿ ವಿಚಾರಿಸಿ, ಅಗತ್ಯತೆಯ ಆಧಾರದ ಮೇಲೆ 500 ಕುಟುಂಬಗಳಿಗೆ ತಲಾ 2000 ಕೊಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮನೆಯವರಿಂದಲೂ ಸಹಕಾರ: ‘ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಡಾಕ್ಟರ್ಸ್. ಕರೊನಾ ನಡುವೆಯೂ ಅಪ್ಪ ಅದೆಷ್ಟೋ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಅಮ್ಮ ಗೈನೋಕಾಲಜಿಸ್ಟ್. ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ಹತ್ತಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ. ಅಪ್ಪ, ಅಮ್ಮ ಆ ಸೇವೆ ಮಾಡಿದರೆ, ನಾನು ಈ ರೀತಿ ಮಾಡುತ್ತಿದ್ದೇನೆ’ ಎಂಬುದು ಪ್ರಣೀತಾ ಮನದಾಳ.

ಆಟೋಗಳಿಗೆ ಸುರಕ್ಷತಾ ಕವಚ

ಇತ್ತೀಚೆಗಷ್ಟೇ ಸರ್ಕಾರ ಆಟೋ ಸಂಚಾರಕ್ಕೆ ಅವಕಾಶ ನೀಡಿತ್ತು. ಆದರೆ, ಆಟೋಗಳಿಗೆ ಜನ ಬರಬೇಕಲ್ವೇ? ಅವರ ಸ್ಥಿತಿಯನ್ನು ಅರಿತ ಪ್ರಣೀತಾ, ಮೊದಲ ಹಂತವಾಗಿ 100ಕ್ಕೂ ಅಧಿಕ ಆಟೋಗಳಿಗೆ ಫೈಬರ್ ಶೀಟ್ ಹಾಕಿಸಿಕೊಟ್ಟರು. ಇದರಿಂದ ಚಾಲಕನಿಗೂ ಮತ್ತು ಪ್ರಯಾಣಿಕನಿಗೂ ಯಾವುದೇ ಸಂಪರ್ಕವಿರುವುದಿಲ್ಲ. ಜತೆಗೆ ಆ ಎಲ್ಲ ಆಟೋಗಳನ್ನು ಸ್ಯಾನಿಟೈಸರ್ ಸ್ಪ್ರೇ ಮೂಲಕ ಶುಚಿಗೊಳಿಸಿಕೊಟ್ಟರು. ಸದ್ಯ ಆಟೋಗಳಿಗೆ ಸುರಕ್ಷತಾ ಕವಚ ಅಳವಡಿಸುವ ಕೆಲಸ ಈಗಲೂ ಚಾಲ್ತಿಯಲ್ಲಿದ್ದು, ಸಾವಿರ ಆಟೋಗಳಿಗೆ ಈ ರೀತಿ ಫೈಬರ್ ಪ್ಲೇಟ್ ಅಳವಡಿಸುವ ಗುರಿ ಹಾಕಿಕೊಂಡಿದ್ದಾರೆ ಪ್ರಣೀತಾ.