ಆನ್ಲೈನ್ ಪೂಜೆಯ ಬದಲು ಕೋವಿಡ್ 19ರ ನಿಯಂತ್ರಣದ ನಿಯಮ ಪಾಲಿಸಿ ಸಾರ್ವಜನಿಕರಿಗೆ ದೇವಸ್ಥಾನಕ್ಕೆ ಹೋಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ; ರಾಷ್ಟ್ರೀಯ ಬಜರಂಗದಳ ಮುಖ್ಯಮಂತ್ರಿಗಳಿಗೆ ಮನವಿ – ಕಹಳೆ ನ್ಯೂಸ್
ದಕ್ಷಿಣ ಕನ್ನಡ : ದೇಶಕ್ಕೆ ಆವರಿಸಿದ ಕೊರೋನ ಎನ್ನುವ ಮಹಾಮಾರಿ ಯಿಂದ ರಕ್ಷಿಸಿ ಕೊಳ್ಳಲು ಭಾರತ ಸರ್ಕಾರ ಬಳಸಿದ ಲಾಕ್ ಡೌನ್ ಎನ್ನುವ ನಡೆ ಅತ್ಯಂತ ಪ್ರಶಂಸನೀಯ, ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳಿಂದಾಗಿಯೇ ಇಂದು ಭಾರತ ದೇಶದಲ್ಲಿ ಕೊರೋನ ನಿಯಂತ್ರಣ ದಲ್ಲಿದೆ ಎಂದರೆ ತಪ್ಪಾಗಲಾರದು.
ನಮ್ಮ ರಾಜ್ಯ ಸರ್ಕಾರವೂ ಅತ್ಯಂತ ಪರಿಣಾಮಕಾರಿ ಯಾಗಿ ಈ ಕ್ರಮಗಳನ್ನು ಪಾಲಿಸಿದ ಈ ಸಂದರ್ಭದಲ್ಲಿ ಸಾರ್ವಜನಿಕರು ಓಡಾಡುವ ಎಲ್ಲಾ ವ್ಯವಸ್ಥೆಗಳನ್ನು ನಿರ್ಬಂಧಿಸುವಂತೆ ಆಸ್ತಿಕ ಹಿಂದೂಗಳ ಶೃಧ್ದಾ ಕೇಂದ್ರವಾದ ದೇವಾಸ್ಥಾನಗಳನ್ನು ಮುಚ್ಚಲಾಗಿದೆ. ಅದಕ್ಕೆ ಹಿಂದೂಗಳ ಸರ್ವ ಸಹಮತವೂ ಇತ್ತು. ಮನುಷ್ಯನ ಜೀವಕ್ಕಿಂತ ಬೇರೆ ಯಾವುದೂ ದೊಡ್ಡದಲ್ಲ ಎನ್ನುವ ಸರ್ಕಾರದ ನಡೆಗೆ ಪ್ರಶಂಸೆಗಳೂ ವ್ಯಕ್ತವಾಗಿತ್ತು. ಆದರೆ ಕೊರೋನ ಮಹಾಮಾರಿಯಿಂದ ರಕ್ಷಿಸಿ ಕೊಳ್ಳಲು ಲಾಕ್ ಡೌನ್ ಒಂದೇ ಪರಿಹಾರ ವಲ್ಲ. ಅದರೊಂದಿಗೆ ಬದುಕಬೇಕಾದುದನ್ನು ನಾವೂ ಅಭ್ಯಾಸಿಸಿಕೊಳ್ಳಬೇಕಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನಿವಾರ್ಯ ಪರಿಸ್ಥಿತಿಗಳಲ್ಲಿ ನಾವು ಓಡಾಡ ಬಹುದು ಎಂಬ ಪ್ರಧಾನಿ ಮಾತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನಮ್ಮ ವಿನಂತಿ ಏನೆಂದರೆ, ರಾಜ್ಯ ಸರ್ಕಾರ ಇತ್ತೀಚಿಗೆ ಸರಕಾರ ಆದಾಯದ ದೃಷ್ಟಿಯಿಂದಲೋ ಅಥವಾ ಮಧ್ಯ ವ್ಯಸನಿಗಳ ಆಗ್ರಹಕ್ಕೆ ಮಣಿದು ಸಾರಾಯಿ ಅಂಗಡಿಗಳನ್ನು ತೆರೆದು ಪೋಲೀಸ್ ಕಾವಲಿನಲ್ಲಿಯೇ ಸಾರಾಯಿ ಕಾದಿಸಿರುವ ವ್ಯವಸ್ಥೆಗೆ ನಾಂದಿ ಹಾಡಿದೆ.
ಆದರೆ ಬದುಕಿನ ಪ್ರತಿಯೊಂದು ಹಂತದಲ್ಲೋ ದೇವರ ಮೊರೆ ಹೋಗಿ ಶ್ರದ್ದಾ ಭಕ್ತಿಯಿಂದ ದೇವರನ್ನು ನಮಿಸಿ ಕೃತಾರ್ಥರಾಗುವ ಭಾಗ್ಯ ಆಸ್ತಿಕಾ ಭಕ್ತರಗೆ ದೇವಸ್ಥಾನದಲ್ಲಿ ಸಿಗದೇ ಹೋಯಿತು.
ಶೀಘ್ರದಲ್ಲಿ ದೇವಸ್ಥಾನ ತೆರೆಯಬಹುದು ಎನ್ನುವ ನಂಬಿಕೆಯಲ್ಲಿದ್ದ ಜನರಿಗೆ ನಿರಾಶೆಯೊಂದಿಗೆ ಆಘಾತವೂ ಆಗಿದೆ. ಕಾರಣ ಸರ್ಕಾರವು ಇತೀಚೆಗೆ ದೇವಸ್ಥಾನದಲ್ಲಿ ಪೂಜೆ ಮಾಡಿಸುವವರು ಆನ್ಲೈನ್ ಹಣ ತೆತ್ತು ರಶೀದಿ ಮಾಡಿಕೊಳ್ಳಬಹುದು, ನಿಮಗೆ ಆನ್ಲೈನ್ ನಲ್ಲಿ ಪ್ರಸಾದಗಳು, ಸೇವೆಗಳು ಲಾಭವಿದೆ ಎಂಬ ಪಕ್ಕಾ ಕಮರ್ಷಿಯಲ್ ಮಾತುಗಳು ಹಿಂದೂಗಳ ಧಾರ್ಮಿಕ ಶ್ರದ್ದೆಗೆ ಆಘಾತ ಉಂಟು ಮಾಡಿದೆ. ಅತ್ಯಂತ ಕಟುವಾಗಿ ಸರಕಾರದ ಈ ನಿರ್ಧಾರಗಳನ್ನು ಖಂಡಿಸುತ್ತೇವೆ.
ತಕ್ಷಣವೇ ಈ ನಿರ್ಧಾರಗಳನ್ನು ಹಿಂಪಡೆದುಕೊಂಡು ಪೋಲೀಸ್ ಕಾವಲಿನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಕ್ತರಿಗೆ ದೇವರ ದರ್ಶನವನ್ನು ಮಾಡಲು ಹಾಗೂ ನೇರವಾಗಿಯೇ ಸೇವೆ ಹಾಗೂ ಪ್ರಸಾದ ಸ್ವೀಕರಿಸಲು ಅವಕಾಶ ಮಾಡಿ ಕೊಡಬೇಕಾಗಿ ಆಗ್ರಹಿಸಿ ಈ ಮನವಿ ಸಲ್ಲಿಸಿದೆ.