Thursday, January 23, 2025
ಸುದ್ದಿ

??Breaking News : ದಕ್ಷಿಣ ಕನ್ನಡ ಜಿಲ್ಲೆಯ 11 ಮಂದಿಗೆ ಇಂದು ಕೊರೋನಾ ‌ಪಾಸಿಟಿವ್ ; ರಾಜ್ಯದಲ್ಲಿ ಒಟ್ಟು 122 ಮಂದಿಗೆ ಇಂದು ಸೋಂಕು‌ ದೃಢ – ಕಹಳೆ ನ್ಯೂಸ್

ಬೆಂಗಳೂರು : ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ಅಬ್ಬರ ಮುಂದುವರಿಸಿದೆ. ಇಂದೂ ಕೂಡ ರಾಜ್ಯದಲ್ಲಿ 122 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ಬರೋಬ್ಬರಿ 28 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಹಾಗೂ ಉಡುಪಿ ಜಿಲ್ಲೆಯಲ್ಲಿ 8 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 2,405ಕ್ಕೆ ಏರಿಕೆಯಾಗಿದೆ.

ಕರಾವಳಿ ಜಿಲ್ಲೆಗಳನ್ನು ಕೊರೊನಾ ಸೋಂಕು ನಿರಂತರವಾಗಿ ಕಾಡುತ್ತಲೇ ಇದೆ. ಇಂದೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಉಡುಪಿ ಜಿಲ್ಲೆಯಲ್ಲಿ 9 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಾತ್ರವಲ್ಲ ಉತ್ತರ ಕನ್ನಡ ಜಿಲ್ಲೆಯಲ್ಲಿಂದು 6 ಮಂದಿ ಕೊರೊನಾ ಮಹಾಮಾರಿ ಒಕ್ಕರಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಬುರಗಿಯಲ್ಲಿ 28, ಯಾದಗಿರಿಯಲ್ಲಿ 16, ಹಾಸನ ಜಿಲ್ಲೆಯಲ್ಲಿ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಬೆಂಗಳೂರು 6, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ರಾಯಚೂರು 5, ಬೆ ಗ್ರಾ 2, ವಿಜಯಪುರ 2 ಮತ್ತು ಬಳ್ಳಾರಿ, ಮಂಡ್ಯ ಹಾಗೂ ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು