Friday, January 24, 2025
ಸುದ್ದಿ

ಅಪ್ರತಿಮ ಹೋರಾಟಗಾರ, ಛಲಗಾರ, ಭಾರತಾಂಬೆಯ ವೀರ ಪುತ್ರ ವಿನಾಯಕ ದಾಮೋದರ್ ಸಾವರ್ಕರ್ 137ನೇ ಜನ್ಮ ಜಯಂತಿ – ಕಹಳೆ ನ್ಯೂಸ್

ಇವತ್ತು ವಿನಾಯಕ ದಾಮೋದರ್ ಸಾವರ್ಕರ್ ಅವರ 137ನೇ ಜನ್ಮದಿನ. 1883, ಮೇ 28ರಂದು ಮಹಾರಾಷ್ಟ್ರದ ನಾಶಿಕ್​ನಲ್ಲಿ ಜನಿಸಿದ ಸಾವರ್ಕರ್ ಈ ದೇಶ ಕಂಡ ಅಪರೂಪದ ಹೋರಾಟಗಾರ. ಇತ್ತೀಚೆಗೆ ಸಾಕಷ್ಟು ವಿವಾದಗಳು ಇವರ ಹೆಸರಿಗೆ ಮೆತ್ತಿಕೊಳ್ಳುತ್ತಿವೆ. ಜೀವಕ್ಕೆ ಹೆದರಿ ಬ್ರಿಟಿಷರ ಪರ ನಿಂತಿದ್ದ ಹೆದರುಪುಕ್ಕಲ ಎಂಬೆಲ್ಲ ಟೀಕೆಗಳು ಇವರ ವಿರುದ್ಧ ಮಾಡಲಾಗುತ್ತಿದೆ. ಆದರೆ, ಇವರ ಜೀವನವೇ ಒಂದು ಹೋರಾಟದ ಪುಸ್ತಕವಾಗಿದೆ. ಈ ದೇಶ ಕಂಡ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ. ಜೊತೆಗೆ, ಹಿಂದುತ್ವದ ಉಗ್ರ ಪ್ರತಿಪಾದಕರೂ ಹೌದು.

ಬಾಲ ಗಂಗಾಧರ್ ತಿಲಕ್, ಬಿಪಿನ್ ಚಂದ್ರಪಾಲ್, ಲಾಲಾ ಲಜಪತ್ ರಾಯ್ ಮೊದಲಾದ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಿತರಾದ ವಿ.ಡಿ. ಸಾವರ್ಕರ್ ಅವರು ಬ್ರಿಟಿಷರಿಗೆ ತಲೆನೋವು ಎನಿಸುವ ಮಟ್ಟಕ್ಕೆ ಹೋರಾಟಗಳನ್ನ ಮಾಡಿದರು. 1857ರ ಸಿಪಾಯಿ ದಂಗೆ ಬಗ್ಗೆ ಇವರು ಬರೆದ “ದ ಹಿಸ್ಟರಿ ಆಫ್ ದ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಪುಸ್ತಕ ಅನೇಕ ಹೋರಾಟಗಾರರಿಗೆ ಸ್ಫೂರ್ತಿಯಾಯಿತು. ಬ್ರಿಟಿಷರು ಈ ಪುಸ್ತಕವನ್ನು ನಿಷೇಧಿಸಿದರೂ ಬೇರೆ ಬೇರೆ ದೇಶಗಳಲ್ಲಿ ಮುದ್ರಣ ಕಂಡು ಭಾರತಕ್ಕೆ ಈ ಪುಸ್ತಕಗಳನ್ನ ಸಾಗಿಸಲಾಗುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

1921ರಲ್ಲಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧಿಸಿ 50 ವರ್ಷ ಜೈಲುಶಿಕ್ಷೆ ವಿಧಿಸಿತು. ಅಂಡಮಾನ್​ ಜೈಲಿನಲ್ಲಿರಿಸಿತು. ಅತ್ಯಂತ ಉಗ್ರತಮ ಶಿಕ್ಷೆ ಇವರಿಗೆ ಕಾದಿತ್ತು. 10 ವರ್ಷ ಯಮಯಾತನೆಯ ಶಿಕ್ಷೆ ಅನುಭವಿಸಿದ ಇವರನ್ನು 1921ರಲ್ಲಿ ಕೆಲ ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿನಾಯಕ ದಾಮೋದರ್ ಸಾವರ್ಕರ್ ಅವರು ಹಿಂದುತ್ವದ ಉಗ್ರ ಪ್ರತಿಪಾದಕರಷ್ಟೇ ಅಲ್ಲ, ಆ ಶಬ್ದವನ್ನು ಜನಪ್ರಿಯಗೊಳಿಸಿದ್ದೇ ಅವರು. ಅವರು ದ್ವಿರಾಷ್ಟ್ರ ಕಲ್ಪನೆಗೆ ಬೆಂಬಲ ನೀಡಿದ್ದರು. ಹಿಂದೂಗಳಿಗೆ ಪ್ರತ್ಯೇಕ ರಾಷ್ಟ್ರ, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಆಗಬೇಕೆಂಬುದು ಇವರ ಅಭಿಪ್ರಾಯ. ಇವರು ಬರೆದ “ಹಿಂದುತ್ವ” ಪುಸ್ತಕದಲ್ಲಿ ಈ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.

ಅಂದಹಾಗೆ, ಸಾವರ್ಕರ್ ಅವರಿಗೆ ವೀರ್ ಎಂಬ ಬಿರುದು ಬರಲು ಬಾಲ್ಯದ ಒಂದು ಘಟನೆ ಕಾರಣ. ಅನ್ಯಧರ್ಮೀಯರ ಗುಂಪೊಂದು ಅವರ ಗ್ರಾಮದ ಮೇಲೆ ಆಕ್ರಮಣ ಮಾಡಿದಾಗ ಸಾವರ್ಕರ್ ಅವರು ವಿದ್ಯಾರ್ಥಿಗಳನ್ನ ಸಂಘಟಿಸಿ ಆ ಗುಂಪನ್ನು ಎದುರುಗೊಂಡಿದ್ದರು. ಆಗ ಇವರ ವಯಸ್ಸು 12 ವರ್ಷ.