Saturday, November 23, 2024
ಸುದ್ದಿ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ : ಯು ಟಿ ಖಾದರ್ ಆರೋಪ – ಕಹಳೆ ನ್ಯೂಸ್

ಮಂಗಳೂರು: ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಸರಕಾರ ಸಂಬಳ ಬಿಡುಗಡೆ ಮಾಡಿಲ್ಲ. ಸರಕಾರ ಕೋವಿಡ್ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು  ಯು ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ವೈದ್ಯರು ಅವರ ಜೀವ ಪಣಕಿಟ್ಟು ಹೆಚ್ಚುವರಿ ಕೆಲಸ ಮಾಡಿರುತ್ತಾರೆ. ಕೋವಿಡ್-19 ಸೋಂಕು ನಿರ್ಮೂಲನೆಗೆ 15 ಸಾವಿರ ದುಡಿಯುವ ವರ್ಗ ಇದ್ದಾರೆ. ಇವರಿಗೆಲ್ಲ ತಕ್ಷಣ ವೇತನ ನೀಡಬೇಕು, ಕೋವಿಡ್-19 ವಾರಿಯರ್ ಎಂದರೆ ಅಷ್ಟೇ ಸಾಲಲ್ಲ. ಆಶಾ ಕಾರ್ಯಕರ್ತೆಯರಿಗೂ ಸರಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಸಿಎಂ ಹೆಚ್ಚುವರಿ ಕೊಡುತ್ತೇವೆ ಅಂತಾರೇ, ಮೊದಲು ಕೊಡುವ ಸಂಬಳ ಕೊಡಿ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ತಿಂಗಳು ಸಮಯ ಇಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಪಿಎಂ ಕೇರ್ ನಲ್ಲಿ ಸಂಗ್ರಹ ವಾದ ಹಣವನ್ನು ಕೊಡಲಿ. ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗ ಮಾಡಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ‌ ನೀಡದಿದ್ರೆ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಲಾಗುವುದು ಎಂದು ಯುಟಿ ಖಾದರ್ ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು