ಸೋಮೇಶ್ವರದ 17 ವರ್ಷದ ಬಾಲಕ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 , ಉಡುಪಿಯಲ್ಲಿ 13 ಮಂದಿಗೆ ಕೊರೊನಾ ಪಾಸಿಟಿಪ್ ; ರಾಜ್ಯದಲ್ಲಿಂದು ಬರೊಬ್ಬರಿ 141 ಮಂದಿಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿಂದು ಮತ್ತೆ ಕೊರೊನಾ ಸೋಂಕು ಶತಕದ ಗಡಿದಾಟಿದೆ. ಬೆಂಗಳೂರು, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕೊರೊನಾ ಶಾಕ್ ಕೊಟ್ಟಿದೆ. ರಾಜ್ಯದಲ್ಲಿಂದು ಬರೊಬ್ಬರಿ 141 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರರ ಸಂಖ್ಯೆ 2922ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ 13 ಪ್ರಕರಣಗಳು ವರದಿಯಾಗಿವೆ.
ಪಿಲಾರುವಿನಲ್ಲಿ ಸೋಂಕು ದೃಢವಾದ ಬಾಲಕನನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿರುವುದು
ಇವುಗಳ ಪೈಕಿ ದಕ್ಷಿಣ ಕನ್ನಡದಲ್ಲಿ 13 ಮಂದಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದವರಾಗಿದ್ದರೆ, ಒಂದು ಪ್ರಕರಣ ಸೋಮೇಶ್ವರ ಗ್ರಾಮದ ಪಿಲಾರ್ ದಾರಂದ ಬಾಗಿಲುವಿನಲ್ಲಿ ವರದಿಯಾಗಿದೆ. 17 ವರ್ಷದ ಬಾಲಕನಿಗೆ ಪಾಸಿಟಿವ್ ಬಂದಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ದ,ಕ ಒಟ್ಟು 75 ಸಕ್ರಿಯ ಪ್ರಕರಣಗಳಿವೆ
ಇನ್ನು ಉಡುಪಿಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 13 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಶನಿವಾರ ಉಡುಪಿ ಜಿಲ್ಲೆಯಲ್ಲಿ 17 ಮಕ್ಕಳು ಸೇರಿದಂತೆ 45 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಉಳಿದಂತೆ ಹಾಸನ ಜಿಲ್ಲೆಯಲ್ಲಿ 13, ವಿಜಯಪುರ 11, ಬೀದರ್ 10, ಶಿವಮೊಗ್ಗ 6, ದಾವಣಗೆರೆ 4, ಹಾವೇರಿ 4, ಕೋಲಾರ 3, ಕಲಬುರಗಿ 2, ಮೈಸೂರು 2, ಉತ್ತರ ಕನ್ನಡ 2, ಧಾರವಾಡ 2, ಬೆಂಗಳೂರು ಗ್ರಾಮಾಂತರ 1, ತುಮಕೂರು 1, ಚಿತ್ರದುರ್ಗ 1 ಹಾಗೂ ಬೆಳಗಾವಿಯಲ್ಲಿ ಓರ್ವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.