Monday, January 20, 2025
ಸುದ್ದಿ

ವಿದೇಶಿ ವಸ್ತು ತಿರಸ್ಕರಿಸಿ, ಸ್ವದೇಶಿ ಬಳಸಿ ; ಯೋಗ ಮಾಡಿ ಕೊರೊನಾ ಓಡಿಸಿ ಎಂದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ : ಕೊರೊನಾ ಮಹಾಮಾರಿಯ ವಿರುದ್ದ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಯೋಗ, ಆಯುರ್ವೇದದ ಬಳಕೆಯಿಂದ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಯೋಗ ಮಾಡಿ ಕೊರೊನಾ ಓಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ದೇಹದ ಇಮ್ಯೂನಿಟಿ, ಕಮ್ಯೂನಿಟಿಗೆ ಯೋಗ ಉತ್ತಮ, ಯೋಗದಿಂದ ಕೊರೊನಾವನ್ನು ಹೊಡೆದೋಡಿಸಬಹುದಾಗಿದೆ. ವಿವಿಧ ಪ್ರಾಣಾಯಾಮಗಳಿಂದ ಉಸಿರಾಟದ ಸಮಸ್ಯೆ ದೂರವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್ ಲೈನ್ ಮೂಲಕವೂ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಅಲ್ಲದೇ ಯೋಗ, ಆಯುರ್ವೇದದತ್ತ ಜನರು ಒಲವು ತೋರಿಸುತ್ತಿದ್ದಾರೆ. 3 ನಿಮಿಷಗಳ ಯೋಗದ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಯೋಗ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದೇಶದ ಜನರು ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಕೇವಲ ಸ್ವದೇಶಿ ವಸ್ತುಗಳನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿದೆ. ಖಾದ್ಯತೈಲ ಹಾಗೂ ಕಚ್ಚಾತೈಲ ಆಮದು ಕಡಿಮೆ ಮಾಡಿ. ಈ ಮೂಲಕ ಸ್ವದೇಶಿ ವಸ್ತುಗಳನ್ನು ಬಳಸೋಣಾವೆಂದು ಅವರು ಕರೆ ನೀಡಿದ್ದಾರೆ.

ಕೊರೊನಾ ವೈರಸ್ ನ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಜನರು, ರೈಲ್ವೆ ನೌಕರರು, ವೈದ್ಯರು, ಪೊಲೀಸರು, ಪತ್ರಕರ್ತರು ದೇಶಕ್ಕಾಗಿ ದುಡಿಯುತ್ತಿದ್ದಾರೆ. ದೇಶದ ಪ್ರತಿಯೊಬ್ಬರೂ ಕೂಡ ಕೊರೊನಾ ವಾರಿಯರ್ಸ್. ದೇಶಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಕೂಡ ಅಭಿನಂದನೆಯನ್ನು ಸಲ್ಲಿಸಿದ ನರೇಂದ್ರ ಮೋದಿ, ಜನರ ಸೇವಾ ಶಕ್ತಿಯೆ ನಮಗೆ ಬಲ, ಕೇಂದ್ರ ಸರಕಾರ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಉದ್ಯೋಗ ಸೃಷ್ಟಿಗೆ ಮುಂದಾಗಿದೆ.

ಆತ್ಮನಿರ್ಭರ ಯೋಜನೆಯಿಂದ ದೇಶದಲ್ಲಿ ಬದಲಾವಣೆ ಸಾಧ್ಯವಿದೆ. ದೇಶದ ಪ್ರತಿ ಗ್ರಾಮ, ಜಿಲ್ಲೆಯೂ ಆತ್ಮನಿರ್ಭರವಾಗಿರಬೇಕು. ಈಗಾಗಲೇ ಆಯುಷ್ ಮಾನ್ ಭಾರತ ಯೋಜನೆ ಯಶಸ್ವಿಯಾಗಿದೆ. ಇನ್ನು ಅಂಫಾನ್ ಚಂಡಮಾರುತ, ಮಿಡತೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೇಂದ್ರ ಸರಕಾರ ನೆರವಾಗಲಿದೆ ಎಂದಿದ್ದಾರೆ.