Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ; ಬೆಳ್ತಂಗಡಿ ತಾಲೂಕಿನ ಅನೇಕ ಕಡೆ ಭೂ ಕುಸಿತ, ಹಾನಿ – ಮರುಕಳಿಸಲಿದೆಯಾ ಕಳೆದ ವರ್ಷದ ಅತಿವೃಷ್ಟಿ..? ಹೈ ಅಲರ್ಟ್ – ಕಹಳೆ ನ್ಯೂಸ್
ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಭೂ ಕಸಿತ ಸಂಭವಿಸಿದೆ. ಕಳೆದ ವರ್ಷದ ಅತಿವೃಷ್ಟಿ ಭೂ ಕುಸಿತವನ್ನು ನೆನಸಿ ಮತ್ತೆ ಭಯ ಮೂಡಿಸಿದ ಇಂದಿನ ಯಮ ಭಯಂಕರ ಮಳೆ.
ಕೊಲ್ಲಿ , ಕುಕ್ಕಾವು ಪ್ರದೇಶದಲ್ಲಿ ಪ್ರವಾಹದ ವಾತಾವರಣ ನಿರ್ಮಾಣವಾಗಿದ್ದು, ಭಾರಿ ಮಳೆಯಾಗಿದೆ. ತಾಲೂಕಿನ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.