Recent Posts

Monday, January 20, 2025
ಸುದ್ದಿ

ಹರಿದ್ರಾರಸದ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ ಫೇಕ್ ಹಳದಿರಸ..! ಗ್ರಾಹಕರೇ ಹುಷಾರ್.. ! – ಯಾಮಾರಿದ್ರೆ ಯಮಲೋಕ ಫಿಕ್ಸ್..!? ; ರೋಗ್ಯದ ಹೆಸರಿನಲ್ಲಿ ಕರಾವಳಿಯಲ್ಲಿ ಅನಾ’ ರೋಗ್ಯ ಸೃಷ್ಟಿಸುತ್ತಿರುವ ಡೂಪ್ಲಿಕೇಟುಗಳು – ಕಹಳೆ ನ್ಯೂಸ್

ಹರಿದ್ರಾರಸ ನೈಜ ಉತ್ಪನ್ನ

ಮಂಗಳೂರು : ದೇಸಿ ಉತ್ಥಾನ ಸಂಸ್ಥೆ ಹಾಗೂ ರಿಷಿ ಹೆರ್ಬ್ಸ್ ಸಂಸ್ಥೆ ಒಡಂಬಡಿಕೆಯೊಂದಿಗೆ ಮಾರುಕಟ್ಟೆಗೆ ತಂದಿದ್ದ ಹರಿದ್ರಾರಸ ಅನ್ನುವ ಅರಿಶಿನದ ಸತ್ತ್ವ ಸುಮಾರು ಒಂದು ದಶಕದ ಕಾಲ ಮಾರುಕಟ್ಟೆಯಲ್ಲಿ ಇದೆ . ಸಾಂಕ್ರಾಮಿಕ ಹಾಗೂ ಜೀವನಶೈಲಿಯ ಸಂಬಂಧಿ ಹಲವಾರು ತೊಂದರೆಗಳಿಗೆ ಇದು ದೈವೀಕ ಆಹಾರ ಸತ್ವ ಎಂದೇ ಪರಿಗಣಿಸಲಾಗಿತ್ತು.

ದೇಶ ವಿದೇಶಗಳ ಮಾರುಕಟ್ಟೆಯ ಬಾಗಿಲು ತಟ್ಟಿದ ಹರಿದ್ರಾರಸಕ್ಕೂ ಈಗ ಕೊರೋನಾ ಬಂದ ಹಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ನಕಲಿ ಎನ್ನಲಾಗುತ್ತಿರುವ ಉತ್ಪನ್ನ

ಇಲ್ಲೊಂದು ಕಂಪೆನಿ ಇದೇ ಶೈಲಿಯ ಅಕ್ಷರಗಳ ಬಳಸುವುದರ ಜೊತೆಗೆ , ಇದೇ ಪದಾರ್ಥವೇನೋ ಅನ್ನುವ ಭ್ರಮೆ ಬರುವ ಹಾಗೆ ದೇಸಿ ಉತ್ಥಾನ ಸಂಸ್ಥೆಯ ವಿಳಾಸ, GST ನಂಬರ್ ಬಳಸಿ ಹಳದೀ ರಸ ಅನ್ನುವ ಪದಾರ್ಥ ಹರಿಯಬಿಟ್ಟದೆ . ಆಶ್ಚರ್ಯ ಅಂದರೆ ಮಂಗಳೂರಿನ ಹಲವು ಆಯುರ್ವೇದ ಔಷಧಿ ಅಂಗಡಿಗಳು ಕೂಡಾ ಇದೇನೋ ಅಧಿಕೃತವಾಗಿ ಅಂಗಿ ಬದಲಿಸಿಕೊಂಡ ಹರಿದ್ರಾರಸ ಅಂತ ನಂಬಿದ ಹಾಗಿದೆ. ಇಲ್ಲಿ ಬಿಲ್ಲು ಕೂಡಾ ಹರಿದ್ರಾರಸ ಅಂತಲೇ ಕೊಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೊಸ ಪದಾರ್ಥದ ಮೇಲೆ ಟ್ರೇಡ್ ಮಾರ್ಕ್ ಆಗಲಿ, ನಂಬಬಲ್ಲ ಯಾವುದೇ ಸರ್ಟಿಫಿಕೇಟ್ ಆಗಲಿ ಇಲ್ಲ, ಎಂಬುದು ಮತ್ತಷ್ಟು ಅನುಮಾನ ಮೂಡುವಂತೆ ಮಾಡಿದೆ.

ಹರಿದ್ರಾರಸ ನೈಜ ಉತ್ಪನ್ನ

.

ನಾವು ಹಳದೀರಸ ಅಂತ ಹೇಳಿಕೊಳ್ಳಳುವ ಕಂಪೆನಿಯ ವೆಬ್ಸೈಟ್ ಅವಲೋಕಿಸಿದಾಗ , ಹಳದೀರಸ ಅಂತ ಬರೆದಿರುವ ಅಷ್ಟೂ ಪುಟಗಳಲ್ಲಿ ಹರಿದ್ರಾರಸದ ವಿವರಣೆ! ಆಶ್ಚರ್ಯ ಅನ್ನುವಂತೆ ಇವತ್ತು ಮಾತ್ರ ಈ ವೆಬ್ಸೈಟ್ ಮಾಯ ಆಗಿಬಿಟ್ಟಿದೆ.

ಇನ್ನೂ ಒಂದಿಬ್ಬರು ದೇಸಿ ಉತ್ಥಾನ ಸಂಸ್ಥೆಯ ಹಳೆಯ ಲೋಗೋ ಬಳಸಿ ಇದೆ ಹೆಸರಲ್ಲಿ ಹಳದಿ ಬಣ್ಣದ ದ್ರಾವಣವನ್ನು ಮಾರುಕಟ್ಟೆಯಲ್ಲಿ ಸಲೀಸಾಗಿ ಹರಿಯಬಿಡುತ್ತಿದ್ದಾರೆ . ಇಂಥ ಪದಾರ್ಥಗಳನ್ನು ಬಳಸಿ ಏನಾದರೂ ಹೆಚ್ಚು ಕಮ್ಮಿ ಆದರೆ ಇವರಲ್ಲಿ ಯಾರೊಬ್ಬರೂ ಫೋನ್ ಎತ್ತುವ ಶ್ರಮ ತಕ್ಕೊಳ್ಳಲ್ಲ.

ಇದೆ ತರಹದ ಅವೆಷ್ಟೋ ಪದಾರ್ಥಗಳಿಗೆ ಡೂಪ್ಲಿಕೇಟ್ ಗಳಿಗೆ ಕೋರೋನಾ ತಗಲಿದ ಹಾಗಿದೆ.

ಹಳದಿ ಪದಾರ್ಥ ಎಲ್ಲಾ ಅರಿಶಿನ ಅಲ್ಲ. ಆಪತ್ತಿಗೆ ಔಷಧಿ ಅಂತ ನಂಬಿ ಬಳಸುವ ಪದಾರ್ಥ ವಿಷ ಆಗದೆ ಇರಲಿ ಎಂಬುದು ನಮ್ಮ ಕಳಕಳಿ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ, ಸತ್ಯಾಸತ್ಯತೆ ಅವಲೋಕಿಸಿ ಕಾನೂನು ಕ್ರಮ ಕೈಗೊಳ್ಳಿ…!