Recent Posts

Monday, January 20, 2025
ಕ್ರೀಡೆಸುದ್ದಿ

ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ ಕ್ರಿಕೆಟಿಗರ ಹಾರ್ದಿಕ್ ಪಾಂಡ್ಯ.! – ಕಹಳೆ ನ್ಯೂಸ್

ಬೆಂಗಳೂರು: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಶೀಘ್ರವೇ ಬಡ್ತಿ ಪಡೆಯುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದಲೂ ಲಾಕ್ ಆಗಿರುವ ಪಾಂಡ್ಯ ಅಪ್ಪನಾಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. 2020ರ ಹೊಸ ವರ್ಷದ ಸಂಭ್ರಮಾಚರಣೆ ಜತೆಗೆ ಸೆರ್ಬಿಯಾ ಮೂಲದ ಗೆಳತಿ ನತಾಶಾ ಸ್ಟಾೃಕೊವಿಕ್ ಅವರೊಂದಿಗೆ ಪಾಂಡ್ಯ ಉಂಗುರ ಬದಲಿಸಿಕೊಂಡಿದ್ದರು. ಇದರೊಂದಿಗೆ ಹಾರ್ದಿಕ್-ನತಾಶ ಜೋಡಿ ಅಧಿಕೃತವಾಗಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿಕೊಂಡಿತ್ತು. ಈ ಜೋಡಿ ಇದುವರೆಗೂ ಅಧಿಕೃತವಾಗಿ ಮದುವೆಯಾಗಿದ್ದನ್ನು ಎಲ್ಲೂ ಬಹಿರಂಗ ಪಡಿಸದಿದ್ದರೂ ಇನ್‌ಸ್ಟಾಗ್ರಾಂನಲ್ಲಿ ಸಾಂಪ್ರದಾಯಿಕ ಉಡುಗೊರೆಯಲ್ಲಿರುವ ಚಿತ್ರವನ್ನು ಪ್ರಕಟಿಸಿದೆ. ಭಾನುವಾರ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಅಪ್ಪನಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಏಕದಿನ ವಿಶ್ವಕಪ್ ಬಳಿಕ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕುಟುಂಬಕ್ಕೆ ಮತ್ತೊಮ್ಮ ಸದಸ್ಯರ ಆಗಮನವಾಗಲಿದೆ. ಹಡಗಿನಲ್ಲಿ ಅದ್ದೂರಿಯಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ-ನತಾಶಾ ಜೋಡಿ ಮದುವೆ ವಿಷಯವನ್ನು ಗೌಪ್ಯವಾಗಿಟ್ಟಿದೆ. ಇದು ಅಭಿಮಾನಿಗಳ ಗೊಂದಲಕ್ಕೂ ಕಾರಣವಾಗಿದೆ. ಮದುವೆಗೆ ಮುಂಚೆಯೇ ಅಪ್ಪನಾಗುತ್ತಿರುವ ಹಾರ್ದಿಕ್, ಮದುವೆ ವಿಷಯ ನಮಗೆ ಗೊತ್ತೇ ಇಲ್ಲ ಭಾಯ್ ಎಂದು ಇನ್‌ಸ್ಟಾಗ್ರಾಂನಲ್ಲಿ ಕೆಲ ಅಭಿಮಾನಿ ಹಾರ್ದಿಕ್ ಜೋಡಿಯನ್ನು ಕಾಲೆಳೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‌ಡೌನ್ ವೇಳೆ ಹಾರ್ದಿಕ್ ಪಾಂಡ್ಯ-ನತಾಶಾ ಜೋಡಿ, ಸಹೋದರ ಕೃನಾಲ್ ಪಾಂಡ್ಯ ದಂಪತಿ ಒಂದೇ ಮನೆಯಲ್ಲಿ ಲಾಕ್ ಆಗಿದ್ದರು. ಜತೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರಿಯರಾಗಿದ್ದ ಈ ಜೋಡಿ ಇದೀಗ ಗುಡ್‌ನ್ಯೂಸ್ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಮ್ಮನಾಗುತ್ತಿರುವ ಸುದ್ದಿಯನ್ನು ನತಾಶಾ ಕೂಡ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸೆರ್ಬಿಯಾ ಮೂಲದ ನತಾಶಾ ಮಾಜಿ ಪ್ರಿಯಕರ ಅಲೀ ಗೂನಿ ಕೂಡ ಇನ್‌ಸ್ಟಾಗ್ರಾಂನಲ್ಲಿ ಶುಭಾಶಯ ಕೋರಿದ್ದಾನೆ. 26 ವರ್ಷದ ಹಾರ್ದಿಕ್ ಪಾಂಡ್ಯ 2016ರಿಂದ ರಾಷ್ಟ್ರೀಯ ತಂಡದ ಕಾಯಂ ಸದಸ್ಯರಾಗಿದ್ದಾರೆ. ಕಳೆದ ವರ್ಷ ವರ್ಷವಷ್ಟೇ ಕಾಫಿ ವಿಥ್ ಕರಣ್ ಕಾರ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಜತೆಗೂಡಿ ಹೆಣ್ಣುಮಕ್ಕಳ ಕುರಿತು ಕೆಲವೊಂದು ಆಕ್ಷೇಪಾರ್ಹ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗಿದ್ದರು. ಬಾಲಿವುಡ್​ನಲ್ಲಿ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನತಾಶಾ, ಹಿಂದಿ ಬಿಗ್ ಬಾಸ್ 8ರ ಸ್ಪರ್ಧಿಯಾಗಿದ್ದರು. ಕನ್ನಡದಲ್ಲಿ ದುನಿಯಾ ವಿಜಿ ಅಭಿನಯದ ದನಕಾಯೋನು ಚಿತ್ರದಲ್ಲಿ ನಟಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು