ಉಡುಪಿ , ಜೂ.2 : ಕರ್ನಾಟಕದಲ್ಲಿ ಕೊರೋನಾ ಕಳೆದ ವಾರದಿಂದ ತಾಂಡವವಾಡುತ್ತಿದೆ. ಪ್ರತಿದಿನ ಶತಕ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಇಂದು ಕೃಷ್ಣ ನಗರಿಯಲ್ಲಿ ಒಂದೇ ದಿನ ಬರೋಬ್ಬರಿ 210 ಪ್ರಕರಣಗಳು ಪತ್ತೆಯಾಗಿದೆ ಎನ್ನುವ ಮಾಹಿತಿಯನ್ನು ಇಂದು ಕಂದಾಯ ಸಚಿವ ಆರ್ ಅಶೋಕ್ ನೀಡಿದ್ದಾರೆ. ಇವರ ಈ ಹೇಳಿಕೆಯಿಂದ ಉಡುಪಿ ಸೇರಿದಂತೆ ಕರಾವಳಿಯೇ ಬೆಚ್ಚಿಬಿದ್ದಿದೆ.
ದೇಶಾದ್ಯಂತ ಸುಮಾರು 200 ಕ್ಕೂ ಹೆಚ್ಚು ರೈಲು ಸಂಚಾರ ಆರಂಭಗೊಂಡಿದೆ. ಇದರಿಂದಾಗಿ ರಾಜ್ಯಕ್ಕೆ ಹೊರರಾಜ್ಯದಿಂದ ಬರುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೃಷ್ಣ ನಗರಿ ಉಡುಪಿಯಲ್ಲಿ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವಲ್ಲಿಯೇ ಸೋಂಕು ಪತ್ತೆಯಾಗುತ್ತಿದೆ.
ನಿನ್ನೆಯು ಒಂದೇ ದಿನ 73 ಜನರಿಗೆ ಸೋಂಕು ದೃಢವಾಗಿತ್ತು. ಉಡುಪಿಗೆ ಆಗಮಿಸಿದ ವೇಳೆ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ಈಗಾಗಲೇ ರಾಜ್ಯಕ್ಕೆ 20 ಸಾವಿರದಷ್ಟು ಮಹಾರಾಷ್ಟ್ರದಿಂದಲೇ ಬಂದಿದ್ದಾರೆ. ಹೀಗಿರುವಾಗ ಅವರಲ್ಲಿಯೇ ಸೋಂಕು ಹೆಚ್ಚಾಗಿಯೇ ಡೃಢವಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಉಡುಪಿಯಲ್ಲಿ 210 ಪ್ರಕರಣ ದೃಢಪಡುವ ಸಾಧ್ಯತೆ ಇದೆ ಎಂದು ಹೇಳಿದರು. ಇದು ಒಂದೇ ದಿನ ರಾಜ್ಯದಲ್ಲೇ ಅತೀ ಹೆಚ್ಚು ಪ್ರಕರಣಗಳಾಗಿವೆ.