Monday, January 20, 2025
ಸಿನಿಮಾಸುದ್ದಿ

ಮಕ್ಕಿಮನೆ ಕಲಾವೃಂದದಿಂದ ವಿನೂತನ ಶೈಲಿಯಲ್ಲಿ ಕೃಷ್ಣ ನೃತ್ಯೋಲ್ಲಾಸ ಎಂಬ ನಾಟ್ಯ ಉತ್ಸವದ ಪ್ರಸ್ತುತಿ – ಕಹಳೆ ನ್ಯೂಸ್

ಮಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ವೇದಿಕೆಗಳಲ್ಲಿ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತಂತ್ರಜ್ಞಾನ ವನ್ನು ಸದುಪಯೋಗ ಪಡಿಸಿಕೊಂಡು ಕಲಾವಿದರಲ್ಲಿ ಇರುವ ಪ್ರತಿಭೆಗೆ ಉತ್ತಮ ವೇದಿಕೆ ಯನ್ನು ಪೇಸ್ ಬುಕ್ ಹಾಗೂ ಯೂಟ್ಯೂಬ್ ಚಾನಲ್ ನಲ್ಲಿ ನಿರ್ಮಿಸಿದ್ದು, ಲಾಕ್ ಡೌನ್ ಆರಂಭದಿಂದಲೂ ಸಂಗೀತ, ನೃತ್ಯ, ಚಿತ್ರಕಲೆ, ಪ್ರಬಂಧ ಬರೆಯುವುದು ಹೀಗೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ನಡೆಸಿರುತ್ತಾರೆ.

ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಗುರುತಿನ ಪ್ರಯತ್ನ ವಿಭಿನ್ನ ನಾಟ್ಯ ಪ್ರಯೋಗದ ಮೂಲಕ ಸಾಕಾರಗೊಂಡಿದೆ.
ಭರತ ನಾಟ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯ ಮಾಡಿದ ಕರಾವಳಿ ಪ್ರದೇಶದ 12 ಜನ ಕಲಾವಿದೆಯರಾದ ವಿದುಷಿ ಚಿತ್ರಾಕ್ಷಿ ಎ. ಕೆ ಸಸಿಹಿತ್ಲು, ವಿದುಷಿ ಅನುಷಾ ಜೈನ್ ನೆಲ್ಯಾಡಿ, ವಿದುಷಿ ಶ್ರಾವ್ಯ ಕೃಷ್ಣ ಬಜ್ಪೆ, ವಿದುಷಿ ಚೈತನ್ಯ ಕೋಟೆ ಸುಬ್ರಹ್ಮಣ್ಯ, ವಿದುಷಿ ಪ್ರಾರ್ಥನಾ ಜೆ ಹೊಸಬೇಟ್ಟು, ವಿದುಷಿ ಮಹಿಮಾ ಎಸ್ ರಾವ್ ಕಾಸರಗೋಡು, ಜ್ಞಾನ ಐತಾಳ್ ಮಂಗಳೂರು, ಶ್ರುತಿ ಡಿ ದಾಸ್ ಕಾವಳಕಟ್ಟೆ, ಪಂಚಮಿ ಮಾರೂರು ಮೂಡುಬಿದಿರೆ, ಅನುಷಾ ಜೈನ್ ಬೆಳುವಾಯಿ , ಸ್ವಾತಿ ಭಟ್ ಅಸೈಗೋಳಿ, ಪೇರಣಾ ಜೆ ಹೊಸ ಬೆಟ್ಟುರವರು ಅನುಕೂಲಕ್ಕೆ ತಕ್ಕಂತೆ ಅವರವರ ಮನೆಯಂಗಳದಲ್ಲಿಯೇ ಗೆಜ್ಜೆ ಕಟ್ಟಿ ‘ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ… ‘ ಎಂಬ ಹಾಡಿಗೆ ಹೆಜ್ಜೆ ಹಾಕಿ…. ವಿಡಿಯೋವನ್ನು ಮಾಡಿ ಕಳುಹಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಎಲ್ಲರ ವಿಡಿಯೋ ಗಳನ್ನು ಒಟ್ಟುಸೇರಿಸಿ ಸಂಕಲನ ಮಾಡಲಾಯಿತು. ನಂತರ ಇದಕ್ಕೆ ‘ಕೃಷ್ಣ ನೃತ್ಯೋಲ್ಲಾಸ’ ಎಂಬ ಹೆಸರನ್ನು ಇಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ಕೃಷ್ಣ ನೃತ್ಯೋಲ್ಲಾಸ ನಾಟ್ಯ ಪ್ರಸ್ತುತಿಯ ಬಿಡುಗಡೆ

ಮಂಗಳೂರು ಆರ್ಯ ಸಮಾಜ ರಸ್ತೆಯಲ್ಲಿ ಇರುವ ಅಂತಾರಾಷ್ಟ್ರೀಯ ಇಸ್ಕಾನ್ ಸಂಸ್ಥೆಯಲ್ಲಿ ಭಾನುವಾರ (31/5/2020) ಸಂಸ್ಥೆಯ ಅಧ್ಯಕ್ಷರಾದ ಕಾರುಣ್ಯ ಸಾಗರ್ ದಾಸ್ ಮಕ್ಕಿಮನೆ ಕಲಾವೃಂದದ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
ರಾಧವಲ್ಲಭಾ ದಾಸ್, ಸುಧಾಕರ ರಾವ್ ಪೇಜಾವರ, ಸುದೇಶ್ ಜೈನ್ ಮಕ್ಕಿಮನೆ , ಶ್ರೇಯಾ ದಾಸ್, ನಿಶಾಲ್ ವಾಮಂಜೂರು, ಸುಮಂತ್ ಮಂಗಳೂರು, ಸಂದೀಪ್ ಮಂಗಳೂರು ಉಪಸ್ಥಿತರಿದ್ದರು.
ಶ್ರೇಯಾ ದಾಸ್ ನಿರೂಪಿಸಿದರು, ಸುದೇಶ್ ಜೈನ್ ಮಕ್ಕಿಮನೆ ವಂದಿಸಿದರು.