Wednesday, November 27, 2024
ಸುದ್ದಿ

ವಿಟ್ಲದ ಬಾಲಕಿಗೆ ಅಶ್ಲೀಲ ಸಂದೇಶ ರವಾನೆ ; ಕೆಲದಿನಗಳ ಹಿಂದೆ ಭಜರಂಗಿಗಳಿಂದ ಹಲ್ಲೆಗೊಳಗಾಗಿದ್ದ ಬಾಲಕನ ಅಸಲಿಯತ್ತು ಬಯಲು : ಲಂಪಟ ಬಾಲಕನ ವಿರುದ್ದ ಪೋಕ್ಸೋ ಪ್ರಕರಣ – ಕಹಳೆ ನ್ಯೂಸ್

ವಿಟ್ಲ: ಕಳೆದ ಕೆಲದಿನಗಳ ಹಿಂದೆ ಒಬ್ಬ ಬಾಲಕನಿಗೆ ಕೆಲವು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆ ಪ್ರಕರಣದಲ್ಲಿ ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಾಗಿದೆ. ಆದರೆ ಈಗ ಘಟನೆಯ ಅಸಲಿಯತ್ತು ಬಯಲಾಗಿದೆ, ಹಲ್ಲೆಗೊಳಗಾದ 16 ವರ್ಷ ಪ್ರಾಯದ ಅಪ್ರಾಪ್ತ ಬಾಲಕ ಅಶ್ಲೀಲ ಸಂದೇಶ ರವಾನೆ ಮಾಡಿದ್ದೂ ಅಲ್ಲದೆ, ಬೆದರಿಕೆ ಹಾಕಿದ ಬಗ್ಗೆ ಬಾಲಕಿ ಒಬ್ಬಳು ಠಾಣೆಗೆ ದೂರು ನೀಡಿದ್ದಾಳೆ, ಆಕೆಯ ದೂರಿನ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣವನ್ನು ವಿಟ್ಲ ಪೋಲೀಸರು ದಾಖಲಿಸಿದ್ದಾರೆ.

ಕೊಳ್ನಾಡು ಗ್ರಾಮದ ಕಾಡು ಮಠ ಪ್ರೌಢ ಶಾಲಾ ಮೈದಾನದಲ್ಲಿ ನಾಲ್ಕು ಮಂದಿ ಸಾರ್ವಜನಿಕರಿಂದ ಹಲ್ಲೆಗೊಳಾದ 16 ವರ್ಷದ ಬಾಲಕ ಕಾನೂನು ಸಂಘರ್ಷಕ್ಕೊಳಗಾಗಿದ್ದಾನೆ. ಬಾಲಕಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನಲೆಯಲ್ಲಿ ಕನ್ಯಾನ ದಿನೇಶ ಸೇರಿ ನಾಲ್ಕು ಮಂದಿ ಎಪ್ರಿಲ್ 21ರಂದು ಬಾಲಕನಿಗೆ ಹಲ್ಲೆ ನಡೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮೇ.27ರಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಮೇ.28ರಂದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೂ.2ರಂದು ಬಾಲಕಿ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಬಾಲಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು