Thursday, November 28, 2024
ಸುದ್ದಿ

ರಾಜ್ಯದಲ್ಲಿ ಜುಲೈ 1ರಂದು ಶಾಲೆ ಪ್ರಾರಂಭವಾಗುವುದಿಲ್ಲ ; ಶಿಕ್ಷಣ ಸಚಿವ ಸುರೇಶ ಕುಮಾರ್ – ಕಹಳೆ ನ್ಯೂಸ್

ಬಾಗಲಕೋಟೆ: ಜುಲೈ 1ರಿಂದ ರಾಜ್ಯದಲ್ಲಿ ಶಾಲಾ ಆರಂಭವಾಗುವುದಿಲ್ಲ, ಇದು ಯೋಚಿತ ದಿನಾಂಕವಾಗಿದೆ. ರಾಜ್ಯದ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಪಾಲಕರ ಸಭೆ ನಡೆಸಿದ ಬಳಿಕ ಯಾವಾಗ ಶಾಲೆ ಆರಂಭಿಸಬೇಕು ಎಂದು ನಿರ್ಧರಿಸಲಾಗುವುದು.

ಜೂ.10,11,12ರೊಳಗೆ ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ ಅಲ್ಲಿ ಬರುವ ಮಾಹಿತಿಯನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಜೂನ್ 15ರೊಳಗೆ ಸಲ್ಲಿಸಿ ನಂತರ ಶಾಲಾ ಆರಂಭ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದಲ್ಲಿಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರೀ ನರ್ಸರಿ,ಎಲ್ಕೆಜಿ,ಯುಕೆಜಿ ಮತ್ತು 1 ಮತ್ತು 2ನೇ ತರಗತಿಯ ಮಕ್ಕಳಿಗೆ ಶಾಲಾ ಆರಂಭದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.ಸಧ್ಯಕ್ಕೆ ಶಾಲೆಗಳನ್ನು ಆರಂಭಿಸದಂತೆ ಬಹುತೇಕ ಜನರು ತಮ್ಮ ಅಭಿಪ್ರಾಯವನ್ನು ಸಹ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ.ಇದನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೋನಾ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯ ಮೇಲೆ ಹೆಚ್ಚು ಪರಿಣಾಮ ಬೀರಿದೆ.ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠವನ್ನು ಹೇಗೆ ಹೇಳಬೇಕು,ಮಕ್ಕಳಿಗೆ ಸುರಕ್ಷತೆ ಹೇಗೆ ಎಂಬ ಇತ್ಯಾದಿ ವಿಷಯಗಳ ಕುರಿತು ಸಮಗ್ರ ಮಾಹಿತಿಯನ್ನು ಕಲೆ ಹಾಕಿಕೊಂಡು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 8,48,203 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲಿದ್ದಾರೆ.ಇದಕ್ಕಾಗಿ 3000 ಪರೀಕ್ಷಾ ಕೇಂದ್ರವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಪರೀಕ್ಷೆ ಬರೆಯಲು ಎಲ್ಲ ಮಕ್ಕಳಿಗೆ ಪರೀಕ್ಷಾ ಕೇಂದ್ರವನ್ನು ಪ್ರವೇಶ ಮಾಡುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು.ಇದಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಗೂ ಎರಡೆರಡಂತೆ ಮಾಸ್ಕ್ಗಳನ್ನು ನೀಡಲಾಗುವುದು.ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಕುರಿತು ಸರ್ಕಾರ ಹೆಚ್ಚು ಆಧ್ಯತೆ ನೀಡಲಾಗಿದೆ.ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಬರೆಯಲು ಎಲ್ಲ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಇನ್ನೂ ಕಂಟೈನಮೆಂಟ್ ಝೋನ್ಗಳನ್ನು ಹೊರತುಪಡಿಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.ಇನ್ನೂ ಪರೀಕ್ಷೆ ಸಂದರ್ಭದಲ್ಲಿ ಕಂಟೈನಮೆಂಟ್ ಝೋನ್ಗಳಲ್ಲಿ ಪರೀಕ್ಷಾ ಕೇಂದ್ರ ಇದ್ದರೆ ಅವುಗಳನ್ನು ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಮತ್ತೊಂದು ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು.ಪರೀಕ್ಷಾ ಕೇಂದ್ರಗಳನ್ನು ಎರಡು ದಿನಗಳ ಮುಂಚೆಯೇ ಡಿ ಸ್ಯಾನಿಟೈಸರ್  ಮಾಡಲಾಗುವುದು.ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ.ಪರೀಕ್ಷೆಗೆ ಬರುವ ಮಕ್ಕಳು ಕಡ್ಡಾಯವಾಗಿ ಮನೆಯಿಂದಲೇ ಕುಡಿಯುವ ನೀರನ್ನು ತೆಗೆದುಕೊಂಡು ಬರಬೇಕು ಎಂದು ಹೇಳಿದರು.

ಪರೀಕ್ಷೆ ಬರೆಯುವ ವಿದ್ಯಾರ್ಥಿ ಗಳು ಕನಿಷ್ಠ ಮೂರುವರೆ ಅಡಿಯಷ್ಟು ಇರಬೇಕು.ಇನ್ನೂ ಡೆಸ್ಕ್ ಕೂಡ ಮೂರುವರೆಯಿಂದ ನಾಲ್ಕು ಅಡಿಯಷ್ಟು ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಬರೆಯಲು ಅವಕಾಶ ನೀಡಲಾಗಿದೆ.ಪ್ರತಿ 200 ಮಕ್ಕಳಿಗೆಒಂದು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.ಇನ್ನೂ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಮಕ್ಕಳಿಗೆ ಏನಾದರೂ ಆರೋಗ್ಯದಲ್ಲಿ ತೊಂದರೆ ಕಂಡುಬಂದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.ಇದಲ್ಲೇ ಪರೀಕ್ಷೆ ಬರೆದ ನಂತರ ಯಾರಿಗಾದರೂ ಸೋಂಕು ಕಂಡುಬಂದರೆ ಅಂತಹವರಿಗೆ ಮುಂದಿನ ಪೂರ್ವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಇದುವರೆಗೆ ರಾಜ್ಯದಲ್ಲಿ 3,19,628 ಜನರು ಕೊರೋನಾ ಬಗ್ಗೆ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ.ಇದರಲ್ಲಿ 3796 ಕೇಸ್ಗಳು ದೃಢವಾಗಿದೆ.52 ಜನರು ಸಾವನ್ನಪ್ಪಿದ್ದಾರೆ.1403 ಜನ ಗುಣಮುಖವಾಗಿದ್ದಾರೆ.2339 ಇನ್ನೂ ಸೋಂಕಿತರ ಚಿಕಿತ್ಸೆ ಪಡೆಯುತ್ತಿದ್ದಾರೆ.ಸಧ್ಯಕ್ಕೆ ಯಾರಿಗೂ ವೆಂಟಿಲೇಟ್ರ ಅವಶ್ಯಕತೆ ಇರುವುದಿಲ್ಲ.ಮರಣ ಪ್ರಮಾಣ ರಾಜ್ಯದಲ್ಲಿ ಶೇ 1.3 ಇದ್ದರೆ ಬೆಡ್ನಲ್ಲಿದ್ದವರ ಪ್ರಮಾಣ ಕೂಡ ಶೇ.8ರಷ್ಟು ಇದೆ.ರಾಜ್ಯದಲ್ಲಿ ಮುಂಜಾಗ್ರತವಾಗಿ 950 ವೆಂಟಿಲೇಟರ್ ಇದ್ದರೂ ಒಬ್ಬರೂ ಇದರಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ನಿನ್ನೆಯಿಂದ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯ ಸಿದ್ದಲಿಂಗಯ್ಯ ಹಿರೇಮಠ,ಜಿ.ಪಂ.ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಪತ್ರಿಕಾಗೋಷ್ಠಿಯಲ್ಲಿದ್ದರು.