Thursday, November 28, 2024
ಸುದ್ದಿ

ಉಡುಪಿಯಲ್ಲಿ 62 , ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮಂದಿಗೆ ಕೊರೊನಾ ಪಾಸಿಟಿವ್ ; ರಾಜ್ಯದಲ್ಲಿಂದು ಒಟ್ಟು 267 ಮಂದಿಗೆ ಸೋಂಕು ದೃಢ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕಳೆದ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ಅವಧಿಯಲ್ಲಿ 267 ಜನರಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4063ಕ್ಕೆ ಏರಿಕೆ ಕಂಡಂತಾಗಿದೆ. ಇಂದು ಕಲಬುರಗಿ ಬಿಗ್​ ಶಾಕ್​ ನೀಡಿದ್ದು ಒಟ್ಟು 105 ಜನರಲ್ಲಿ ಸೋಂಕು ದೃಢವಾಗಿದೆ. ಇದಲ್ಲದೇ ಉಡುಪಿಯಲ್ಲಿ 62, ರಾಯಚೂರಿನಲ್ಲಿ 35 ಹಾಗೂ ಬೆಂಗಳೂರು ನಗರದಲ್ಲಿ 20 ಜನರಿಗೆ ಸೋಂಕು ತಗುಲಿದೆ.

ಕೊರೊನಾ ಸೋಂಕಿನ ಕಾರಣದಿಂದಾಗಿ ದಾವಣಗೆರೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಸೋಂಕಿತರನ್ನು ಸೇರಿ ಒಟ್ಟು 55 ಸೋಂಕಿತರು ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಸಂಗತಿಯೆಂದರೆ ರಾಜ್ಯದಲ್ಲಿ ಇಂದು 111 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮಂದಿಗೆ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇನ್ನು ಇಲ್ಲಿಯ ತನಕ ಉಡುಪಿ ಜಿಲ್ಲೆಯಲ್ಲಿ 386 ಮಂದಿ ಸೋಂಕಿತರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೂಡ 4936 ಮಂದಿಯ ವರದ ಲಭಿಸಲು ಬಾಕಿ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ಪತ್ತೆಯಾಗಿರುವ 267 ಮಂದಿ ಸೋಂಕಿತರ ಪೈಕಿ 250 ಮಂದಿ ಹೊರ ರಾಜ್ಯಗಳಿಂದ ಬಂದವರೇ ಆಗಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್​..?

ಕಲಬುರಗಿ – 105
ಉಡುಪಿ -62
ಬೆಂಗಳೂರು ನಗರ -20
ಮಂಡ್ಯ -13
ಯಾದಗಿರಿ -09
ರಾಯಚೂರು -35
ಹಾಸನ -01
ದಾವಣಗೆರೆ -03
ವಿಜಯಪುರ -06
ದಕ್ಷಿಣ ಕನ್ನಡ -02
ಮೈಸೂರು -02
ಬಾಗಲಕೋಟೆ -02
ಶಿವಮೊಗ್ಗ -02
ಕೋಲಾರ -02
ಬಳ್ಳಾರಿ -01
ಧಾರವಾಡ -01
ಬೆಂಗಳೂರು. ಗ್ರಾಮಾಂತರ -01

ಯಾವ ಜಿಲ್ಲೆಯಲ್ಲಿ ಎಷ್ಟು ಡಿಸ್ಚಾರ್ಜ್​ ​?

ಹಾಸನ -28
ಬೆಂಗಳೂರು ನಗರ -19
ದಾವಣಗೆರೆ -13
ಚಿಕ್ಕಬಳ್ಳಾಪುರ -13
ದಕ್ಷಿಣ ಕನ್ನಡ -09
ಬೆಳಗಾವಿ -07
ಬಳ್ಳಾರಿ -05
ಬಾಗಲಕೋಟೆ -05
ಶಿವಮೊಗ್ಗ -04
ವಿಜಯಪುರ -03
ಗದಗ -03
ಉತ್ತರ ಕನ್ನಡ -01
ಧಾರವಾಡ -01