ಬೆಳ್ತಂಗಡಿಯಲ್ಲಿ ಇಸ್ಪೀಟ್ ಅಡ್ಡೆಗೆ ಪೊಲೀಸರು ದಾಳಿ ನಡೆಸಿದಂತೆ ನಟಿಸಿ 10 ಲಕ್ಷ ರೂಪಾಯಿ ನಗದು ಸಹಿತ ಓಡಿ ಹೋದ ಜೂಜುಕೋರ ದಾವುದ್ – ಕಹಳೆ ನ್ಯೂಸ್
ಬೆಳ್ತಂಗಡಿ, ಜೂ 04 : ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಇಸ್ಪೀಟ್ ಅಡುತ್ತಿದ್ದ ಸ್ಥಳದಿಂದ ಆರೋಪಿಯೋರ್ವ ಪೊಲೀಸರು ದಾಳಿ ನಡೆಸಿದಂತೆ ನಟಿಸಿ 10 ಲಕ್ಷ ರೂ. ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಪಿ ದಾವುದ್ ಮತ್ತು ಐದು ಮಂದಿ ಹಣ ದೋಚಿ ಪರಾರಿಯಾಗಿರುವುದಾಗಿ ಚಿಕ್ಕಮಗಳೂರಿನ ಮಳಲೂರು ನಿವಾಸಿ ಹೊಯ್ಸಳ ಜೆ.ಪಿ. ಎಂಬುವವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇ 29ರಂದು ಹೊಯ್ಸಳ ಜೆ.ಪಿ. ಎಂಬುವರು ಲಾಲ ಪಡ್ಲಾಡಿ ಸಮೀಪ ಮನೆಯಂಗಳದಲ್ಲಿ ಇಸ್ಪೀಟ್ ಆಟ ಆಟದಲ್ಲಿ ನಿರತರಾಗಿದ್ದಾಗ ದಾವುದ್ ಸ್ಥಳದಲ್ಲಿದ್ದು, ರಾತ್ರಿ 10.30ರವೇಳೆಗೆ ಪೊಲೀಸ್ ದಾಳಿ ಮಾಡಿದಂತೆ ನಟಿಸಿದ್ದಾನೆ. ಬಳಿಕ ಆತ ಮತ್ತು 5-6ಮಂದಿ ಯುವಕರ ತಂಡ ಹೊಯ್ಸಳ ಅವರ ಹಣೆಗೆ ಹಲ್ಲೆ ನಡೆಸಿ ಕೈಯಲ್ಲಿದ್ದ 10 ಲಕ್ಷ ರೂ. ನಗದು ಇದ್ದ ಬ್ಯಾಗನ್ನು ದರೋಡೆ ಮಾಡಿರುವುದಾಗಿ ದೂರು ದಾಖಲಾಗಿದೆ.
ಲಾಕ್‌ಡೌನ್ ಸಂದರ್ಭ ಇಸ್ಪೀಟ್ ಆಡಿದ ಹಿನ್ನಲೆಯಲ್ಲಿ ಅರೋಪಿಗಳು ಹಾಗೂ ಅಪಾದಿತರ ವಿರುದ್ಧವೂ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.