Wednesday, November 27, 2024
ಸುದ್ದಿ

ಉಪ್ಪಿನಂಗಡಿಯಲ್ಲಿ ಮೀನಿನ ವ್ಯಾಪಾರಿಯ ಮೇಲೆ ಪಿಡಿಒ ದರ್ಪ ; ಸ್ಥಳೀಯರಿಂದ ಪಿಡಿಒ ಕಾರಿಗೆ ಮುತ್ತಿಗೆ – ಘಟನೆಯ ಹಿಂದೆ ಮತೀಯ ಸಂಘಟನೆ, ಸ್ಥಳೀಯ ಅನ್ಯಮತೀಯ ಮೀನು ವ್ಯಾಪಾರಿಗಳ ಕುಮ್ಮಕ್ಕು ಶಂಕೆ – ಕಹಳೆ ನ್ಯೂಸ್

ಉಪ್ಪಿನಂಗಡಿ, ಜೂ 04 : ಇಲ್ಲಿನ ಗ್ರಾ. ಪಂ. ಪಿ.ಡಿ.ಒ ವ್ಯಾಪಾರಿಯ ಮೇಲೆ ದರ್ಪ ತೋರಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಕಾರಣ ನೀಡದೆ ಮೀನು ವ್ಯಾಪಾರಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ವ್ಯಾಪಾರಕ್ಕೆ ಅಡ್ಡಿಪಡಿಸಿದ ಉಪ್ಪಿನಂಗಡಿ ಪಿ.ಡಿ.ಒ. ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಪಿ.ಡಿ.ಒ. ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಅಶೋಕ್ ಶೆಟ್ಟಿಯಿಂದ ಹೊಸದಾಗಿ ಮೀನು ವ್ಯಾಪಾರ ಆರಂಭವಾಗಿತ್ತು. ಗೂಡ್ಸ್ ಟೆಂಪೋದಲ್ಲಿ ಸಂಚಾರಿ ಮೀನು ಮಾರಾಟ ಮಾಡುತ್ತಿದ್ದರು. ಈ ಸಂದರ್ಭ ಬಲವಂತವಾಗಿ ಕೀ ಪಡೆದು ಅಧಿಕಾರಿ ದರ್ಪ ತೋರಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಮೀನು ವ್ಯಾಪಾರಿಯ ಕುಮ್ಮಕ್ಕಿನಿಂದ ಪಿಡಿಒ ಈ ರೀತಿ ಮಾಡಿದ್ದಾರೆ ಎಂಬುವುದು ಸ್ಥಳೀಯರ ಆರೋಪವಾಗಿದೆ. ಇನ್ನು ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಕೋಮುಧ್ವೇಷದಿಂದ ಸ್ಥಳೀಯ ಮತೀಯ ಸಂಘಟನೆಯ ಕುಮ್ಮಕ್ಕು ಶಂಕೆ :

ಪಿಡಿಒ ವರ್ತನೆ ಹಿಂದೆ ಸ್ಥಳೀಯ ಅನ್ಯಮತೀಯರ ಮೀನು ವ್ಯಾಪಾರಿಗಳ ಕುಮ್ಮಕ್ಕು ಎದ್ದು ಕಾಣುತ್ತಿದೆ. ಹಿಂದೂಗಳು ಮೀನು ವ್ಯಾಪರ ನಡೆಸುತ್ತಿರುವುದು ಸ್ಥಳೀಯ ಕೆಲವು ಮತೀಯ ಸಂಘಟನೆಗಳ ಮುಖಂಡರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ವ್ಯಾಪಾರಕ್ಕು ವ್ಯಾಪಕ ಹೊಡೆತಬಿದ್ದಿದ್ದು, ಈ ಹಿನ್ನಲೆಯಲ್ಲೇ ವಿಡಿಒ ಅವರನ್ನು ಬಳಸಿಕೊಂಡು ಪಂಚಾಯತ್ ಅಧ್ಯಕ್ಷರಾಧಿಯಾಗಿ‌ ಕೆಲ ಸ್ಥಳೀಯ ಮತೀಯ ಮುಖಂಡರು ಈ ಘಟನೆಯ ಹಿಂದೆ ಇದ್ದಾರೆ ಎಂದು ಹಿಂದೂ ಪರ ಸಂಘನೆಗಳು ಆರೋಪಿಸಿದೆ‌.