ಲೋಕಾರ್ಪಣೆಗೆ ಸಿದ್ಧಗೊಂಡ ಗುರುಪುರ ಸೇತುವೆ ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲ್ – ಸಾಥ್ ನೀಡಿದ್ರು ಡಾ. ವೈ. ಭರತ್ ಶೆಟ್ಟಿ – ಕಹಳೆ ನ್ಯೂಸ್
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169 ಗುರುಪುರ ನದಿಗೆ ನಿರ್ಮಿಸಲಾದ ನೂತನ ಸೇತುವೆ ಉದ್ಘಾಟನೆಗೆ ಸಿದ್ಧಗೊಂಡಿದೆ. ಲೋಕಾರ್ಪಣೆಗೆ ತಯಾರಾಗಿರುವ ಈ ನೂತನ ಸೇತುವೆಯ ಅಂತಿಮ ಹಂತದ ಕಾಮಗಾರಿಗಳನ್ನು ಸಂಸದರಾದ ನಳಿನ್ ಕುಮಾರ್ ಕಟೀಲು ವೀಕ್ಷಿಸಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿ ಜೊತೆಗಿದ್ದರು.
40 ಕೋಟಿ ರೂ. ಅಂದಾಜು ವೆಚ್ಚದ ಹೊಸ ಸೇತುವೆ ಯೋಜನೆಯಲ್ಲಿ 25 ಮೀ. ಉದ್ದದ ಏಳು ಅಂಕಣಗಳಿವೆ. ಎರಡೂ ಕಡೆ ಸೇತುವೆಯ ಅಗಲ 16 ಮೀ. ಸೇತುವೆ ರಸ್ತೆ ಅಗಲ 11 ಮೀ., ಕಾಲುದಾರಿ ಅಗಲ 2.50 ಮೀ., ಫೈಲ್ ಫೌಂಡೇಶನ್, ಮೇಲ್ಕಟ್ಟಡಕ್ಕೆ ಪಿಎಸ್‌ಸಿ ಗರ್ಡರ್ ಬೀಮ್ ಮತ್ತು ಸ್ಪ್ಯಾಬ್, ಎರಡೂ ಕಡೆ ಕೂಡು ರಸ್ತೆ ತಲಾ 500 ಮೀ. ನಿರ್ಮಾಣವನ್ನು ಇದು ಒಳಗೊಂಡಿದೆ.