Wednesday, November 27, 2024
ಸುದ್ದಿ

ಮಂಗಳೂರಿನ ವೆನ್ಲಾಕ್ ಕೊವೀಡ್ ಆಸ್ಪತ್ರೆಯಲ್ಲಿ ” ಕೊವೀಡ್ 19 ” ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ ಉಪ್ಪಿನಂಗಡಿಯ ಪ್ಲಾವಿಯ – ಕಹಳೆ‌ನ್ಯೂಸ್

ಉಪ್ಪಿನಂಗಡಿ : ಕೊರೋನಾ ವೈರಸ್ ಅಂದ್ರೆ ಭಯ ಭೀತರಾಗೋ ಜನಗಳ ಮಧ್ಯೆ ಅದೆಷ್ಟೋ ಆಸ್ಪತ್ರೆಗಳಲ್ಲಿರೊ ನರ್ಸ್ ಗಳು ತಮ್ಮ ಜೀವವನ್ನೇ ಕೋವಿಡ್ 19 ರೋಗಿಗಳ ಆರೈಕೆಗೆ ಮುಡಿಪಾಗಿಸಿದ್ದಾರೆ. ಅಂತೆಯೆ, ಉಪ್ಪಿನಂಗಡಿಯ ವಳಾಲಿನ ವಿದ್ಯಾನಗರದ ಪೀಟರ್ ವೇಗಸ್ ಹಾಗೂ ಐರಿನ್ ವೇಗಸ್ ದಂಪತಿಯ ಪುತ್ರಿ “ಪ್ಲಾವಿಯ” ಇವರು ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ಆರು ತಿಂಗಳಿಂದ ಒಂದು ವರ್ಷದ ಬಾಂಡ್ ಶುಶ್ರೂಷಕಿಯಾಗಿ ಕೆಲಸ ನಿರ್ವಹಿಸಿದ್ದು, ಇದೀಗ ಗುತ್ತಿಗೆ ಆಧಾರದಲ್ಲಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲೆಂದೆ ನೇಮಕಗೊಂಡಿದ್ದಾರೆ.

ವಳಾಲು ಎಂಬಲ್ಲಿ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು, ಪಾದುವ ಇಲ್ಲಿ ಪಿಯುಸಿ ಶಿಕ್ಷಣವನ್ನು ಜೊತೆಗೆ ಸರಕಾರಿ ವೆನ್ಲಾಕ್ ಶುಶ್ರೂಷ ತರಬೇತಿ ಶಾಲೆಯಲ್ಲಿ ನರ್ಸಿಂಗ್ ಮಾಡಿರುವ ಪ್ಲಾವಿಯಾ ಇದೀಗ ಜೀವದ ಹಂಗು ತೊರೆದು ಕೊವೀಡ್ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಶ್ಲಾಘನೀಯ ಸಂಗತಿ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು