Recent Posts

Sunday, January 19, 2025
ಸುದ್ದಿ

ಸುಬ್ರಹ್ಮಣ್ಯ ಅತ್ಯಾಚಾರ ಪ್ರಕರಣ ಆರೋಪಿ ದುರ್ಗಾಪ್ರಸಾದ್‌ಗೆ ಜಾಮೀನು – ವಿಡಿಯೋ ಕಾನ್ಫರೆನ್ಸ್ ಮೂಲಕ ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ – ಕಹಳೆ ನ್ಯೂಸ್

ಪುತ್ತೂರು: ಕಡಬ ತಾಲೂಕು ಸುಬ್ರಹ್ಮಣ್ಯದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಳ್ಯ ತಾಲೂಕಿನ ಹೊಸಳಿಕೆ ನಿವಾಸಿ ದುರ್ಗಾಪ್ರಸಾದ್‌ರವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಸಂತ್ರಸ್ತೆ ಸುಬ್ರಮಣ್ಯದ ನಿವಾಸಿಯಾಗಿದ್ದು ಎಸ್. ಎಸ್.ಎಲ್.ಸಿ ತನಕ ಓದಿ ಬಳಿಕ ಮನೆಯಲ್ಲಿದ್ದರು.ಆಗಾಗ್ಗೆ ಸುಬ್ರಮಣ್ಯ ಪೇಟೆಗೆ ಬಂದು ಹೋಗುತ್ತಿದ್ದ ಆಕೆಗೆ ೨೦೧೯ನೇ ಅಕ್ಟೋಬರ್ ತಿಂಗಳಲ್ಲಿ ಸುಬ್ರಮಣ್ಯದಲ್ಲಿ ಅಟೋ ರಿಕ್ಷಾ ಓಡಿಸುತ್ತಿರುವ ಸಂಕೇತ ಎಂಬಾತನ ಪರಿಚಯವಾಗಿ ನಂತರ ಅವರು ಮಾತನಾಡಿಕೊಂಡಿದ್ದರು.ಅದಾದ ಬಳಿಕ ಒಂದು ದಿನ ಸುಬ್ರಮಣ್ಯದಲ್ಲಿರುವ ಒಂದು ರೂಮಿಗೆ ಆಕೆಯನ್ನು ಕರೆದೊಯ್ದಿದ್ದ ಸಂಕೇತ್ ಆಕೆಯ ಮೇಲೆ ಬಲತ್ಕಾರ ಮಾಡಿದ್ದರೆಂದು ಆರೋಪಿಸಲಾಗಿದೆ..೨ ತಿಂಗಳ ನಂತರ ಆಕೆ ಅನಾರೋಗ್ಯವಿದ್ದ ವಿಚಾರವನ್ನು ಸಂಕೇತರ ಸ್ನೇಹಿತ ದುರ್ಗಾಪ್ರಸಾದ್ ಎಂಬಾತನಿಗೆ ತಿಳಿಸಿದಾಗ ಆತನು ಸಂತ್ರಸ್ತೆಗೆ ಗರ್ಭಪಾತವಾಗುವ ಮಾತ್ರೆಯನ್ನು ತಂದು ಕೊಟ್ಟಿದ್ದು ಅದನ್ನು ತಿಂದ ಬಳಿಕ ಆಕೆಗೆ ರಕ್ತಸ್ರಾವವಾಗಿದ್ದರಿಂದ ಆಕೆಯ ಮಾವ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.ಅಲ್ಲಿಂದ ಗುಣಮುಖಳಾಗಿ ಬಂದ ಬಳಿಕ ಸುಬ್ರಮಣ್ಯ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ ೩೭೬(೨), ೩೭೬(ಡಿ),೩೧೩, ೫೦೬,೨೦೧ ಜೊತೆಗೆ ೧೪೯ ಮತ್ತು ೫, ೬ ಪೊಕ್ಸೋ ಕಾಯ್ದೆ ಮತ್ತು ಕಲಂ.೩(೨) ವಿ ,೩(೨)ವಿ.ಎ ರ ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಯ್ದೆ ಅನ್ವಯ ೨ ಜನರ ವಿರುದ್ಧ ಕೇಸು ದಾಖಲಿಸಿದ್ದರು.ತದನಂತರ ಸಂತ್ರಸ್ತೆಯ ಮರುಹೇಳಿಕೆಯ ಆಧಾರದಲ್ಲಿ ಇನ್ನೂ ೮ ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.ತನಿಖೆ ಪೂರ್ಣಗೊಳಿಸಿದ ಸುಬ್ರಮಣ್ಯ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ವರದಿಯಲ್ಲಿ ದುರ್ಗಾಪ್ರಸಾದ್‌ರನ್ನು ಒಂದನೇ ಆರೋಪಿಯನ್ನಾಗಿ ಮಾಡಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋ ಕಾನ್ಫರೆನ್ಸ್ ಮೂಲಕ ಮಹೇಶ್ ಕಜೆ ವಾದ ಮಂಡನೆ :

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ಲಾಕ್‌ಡೌನ್ ಇದ್ದುದರಿಂದ, ನ್ಯಾಯಾಲಯದ ವಿಚಾರಣೆಯು ಸ್ಥಗಿತಗೊಂಡು ನಂತರ ಉಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಈ ಕೇಸಿನ ವಿಚಾರಣೆಯನ್ನು ಆನ್‌ಲೈನ್ ಮುಖಾಂತರ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ನಂತರ ವೀಡಿಯೋ ಕಾನ್ಫರೆನ್ಸ್ ಮುಖಾಂತರ ದುರ್ಗಾಪ್ರಸಾದ್‌ರವರ ಪರವಾಗ ನ್ಯಾಯವಾದಿ ಮಹೇಶ್ ಕಜೆಯವರು ವಾದ ಮಂಡಿಸಿದ್ದರು. ಆರೋಪಿ ದುರ್ಗಾಪ್ರಸಾದ್ ವಿರುದ್ಧ ಆರೋಪಿಸಿದ ಘಟನೆಯು ೨೦೧೪ರಂದು ನಡೆದಿದ್ದು ಎನ್ನಲಾಗಿದ್ದರೂ ೮/೦೨/೨೦೨೦ರಂದು ಫಿರ್ಯಾದಿಯು ೬ ವರ್ಷ ವಿಳಂಬವಾಗಿ ದೂರು ಸಲ್ಲಿಸಿರುತ್ತಾರೆ ಮತ್ತು ಫಿರ್ಯಾದಿಯಲ್ಲಿ ಎಲ್ಲಿಯು ದುರ್ಗಾಪ್ರಸಾದ್‌ರವರು ಅತ್ಯಾಚಾರ ಮಾಡಿರುತ್ತಾರೆಂದು ನಮೂದಿಸಿರುವುದಿಲ್ಲ,ಆಸ್ಪತ್ರೆಯಲ್ಲಿ ದುರ್ಗಾಪ್ರಸಾದ್ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿರುವುದಿಲ್ಲ ಇತ್ಯಾದಿ ಪ್ರಮುಖ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಸದ್ರಿ ಪ್ರಕರಣವನ್ನು ಗಮನಿಸಿದರೆ ,ಎಲ್ಲೂ ಆರೋಪಿ ಈ ಕೃತ್ಯ ನಡೆಸಿದ್ದಾರೆ ಎಂಬಂತಹ ವಿಚಾರಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಸಾಕ್ಷಿ ಆಧಾರಗಳು ಕಂಡುಬರುವುದಿಲ್ಲ ಇತ್ಯಾದಿ, ವಕೀಲರ ವಾದವನ್ನು ಪರಿಗಣಿಸಿದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರುಡಾಲ್ಫ್ ಪಿರೇರಾರವರು ಆರೋಪಿಗೆ ಜಾಮೀನು ಮಂಜೂರು ಮಾಡಿರುತ್ತಾರೆ.

ದಲಿತ ವರ್ಗಕ್ಕೆ ಸೇರಿದ ಅಪ್ರಾಪ್ತೆಯ ಮೇಲೆ ನಡೆದಿದೆ ಎನ್ನಲಾದ ಈ ಪ್ರಕರಣದಲ್ಲಿ ವಿವಿಧ ಹಂತದಲ್ಲಿ ಬೇರೆ ಬೇರೆ ವ್ಯಕ್ತಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು ಮತ್ತು ಸಹಕರಿಸಿದ್ದಾರೆ ಎಂದು ಹೋಮ್ ಸ್ಟೇ ಮಾಲಕರ ಮೇಲೆ, ಮೆಡಿಕಲ್ ಶಾಪ್‌ನವರ ಮೇಲೆ ದೂರು ದಾಖಲಾಗಿ ಹಲವಾರು ತಿರುವುಗಳನ್ನು ಪಡೆದುಕೊಂಡ ಈ ಪ್ರಕರಣ ಸಾರ್ವಜನಿಕವಾಗಿ ಸಾಕಷ್ಟು ಕುತೂಹಲ ಮೂಡಿಸಿತ್ತು.