Recent Posts

Sunday, January 19, 2025
ಸುದ್ದಿ

Breaking News : ಪುತ್ತೂರು ತಾಲೂಕಿನ ನೆಕ್ಕಿಲಾಡಿಯ ಬೇರಿಕೆ ಮಹಿಳೆಗೆ ಕೊರೊನಾ ಪಾಸಿಟಿವ್ ; ಸೋಂಕಿನ ಮೂಲ ನಿಗೂಢ – ಪ್ರದೇಶ ಸೀಲ್ ಡೌನ್ – ಕಹಳೆ ನ್ಯೂಸ್

ಉಪ್ಪಿನಂಗಡಿ : ೩೪ ನೆಕ್ಕಿಲಾಡಿಯ ಗ್ರಾಮದ ಶಾಂತಿನಗರ – ಅಂಬೇಲ ಮಧ್ಯೆಯ ಬೇರಿಕೆಯ ನಿವಾಸಿ ಮಹಿಳೆಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು, ಆದರೆ ಇವರಿಗೆ ಈ ಸೋಂಕು ಯಾವ ಮೂಲದಿಂದ ಹರಡಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಸುಮಾರು ೪೮ರ ಹರೆಯದ ಈ ಮಹಿಳೆಯು ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಜ್ವರದ ಹಿನ್ನೆಲೆಯಲ್ಲಿ ಅಲ್ಲಿ ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಶುಕ್ರವಾರ ಬಂದಿದ್ದು, ಈ ಸಂದರ್ಭ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಮಹಿಳೆಯ ಪತಿ ಅಡಿಕೆ ವ್ಯಾಪಾರಿಯಾಗಿದ್ದು, ಉಪ್ಪಿನಂಗಡಿಯಲ್ಲಿ ಅಂಗಡಿ ಹೊಂದಿದ್ದಾರೆ. ಸುದ್ದಿ ತಿಳಿದು ಇವರ ಮನೆಗೆ ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ಜಯವಿಕ್ರಮ್, ೩೪ ನೆಕ್ಕಿಲಾಡಿ ಗ್ರಾಮಕರಣಿಕ ರಮಾನಂದ ಚಕ್ಕಡಿ ಭೇಟಿ ನೀಡಿದ್ದು, ಮನೆಯಲ್ಲಿದ್ದ ಇವರ ಪತಿ ಹಾಗೂ ಇಬ್ಬರು ಮಕ್ಕಳಿಗೆ ಮನೆಯಿಂದ ಹೊರಗೆ ಬರದಂತೆ ಸೂಚನೆ ನೀಡಿದ್ದಾರೆ. ಇವರ ಇನ್ನೋರ್ವ ಮಗ ತಾಯಿಯೊಂದಿಗಿದ್ದಾನೆ.
ಈ ಮಹಿಳೆಯು ಮನೆಯಲ್ಲಿಯೇ ಇದ್ದು ಇವರಿಗೆ ಕೊರೋನಾ ಯಾವ ಮೂಲದಿಂದ ಬಂದಿದೆ ಎಂಬ ಇನ್ನೂ ಸ್ಪಷ್ಟವಾಗಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಪರಿಶೀಲನೆ ನಡೆಸಲಿದ್ದು, ಜಿಲ್ಲಾಧಿಕಾರಿ ಆದೇಶದ ಬಳಿಕ ಈ ಮನೆಯು ಸೀಲ್‌ಡೌನ್‌ಗೊಳಗಾಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು