Friday, September 20, 2024
ಸುದ್ದಿ

ಮೂಲ್ಕಿಯ ಉದ್ಯಮಿ ಹತ್ಯೆ ಪ್ರಕರಣ : ನಾಲ್ವರು ಹಂತಕರ ಬಂಧನ, ಮಾರಕಾಸ್ತ್ರ ವಶಕ್ಕೆ, ಪ್ರಕರಣ ಪ್ರಮುಖ ಆರೋಪಿ ಯುವ ಕಾಂಗ್ರೆಸ್ ವಲಯಾಧ್ಯಕ್ಷ ಹಕೀಮ್ ಗೆ ಬಲೆ ಬೀಸಿದ ಪೋಲೀಸರು..! – ಕಹಳೆ ನ್ಯೂಸ್

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಜಂಕ್ಷನ್ ಸಮೀಪದ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಮೂಡಬಿದ್ರೆಯ ಜ್ಯುವೆಲ್ಲರಿ ಮಾಲಕ ಅಬ್ದುಲ್ ಲತೀಫ್ ಎಂಬವರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ನಿನ್ನೆ ಸಂಜೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕಾರ್ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಕಾರ್ನಾಡ್ ದರ್ಗಾ ರಸ್ತೆಯ ಹಂಝ ಎಂಬವರ ಪುತ್ರ ಮುಹಮ್ಮದ್ ಹಾಶಿಮ್(27), ನಿಸಾರ್ ಯಾನೆ ರಿಯಾಜ್(33), ಉಚ್ಚಿಲ ಬಡಾ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಬೂಬಕರ್ ಸಿದ್ದಿಕ್(27), ಕಾರ್ನಾಡ್ ದರ್ಗಾ ರಸ್ತೆಯ ಎಂ.ಕೆ. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ರಾಝೀಮ್(24) ಎಂದು ಹೆಸರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ಸಂಜೆ ಕಾರ್ನಾಡ್ ದರ್ಗಾ ರೋಡ್ ನಿವಾಸಿ ಕಾಂಗ್ರೆಸ್ ಮುಖಂಡ ಮುನೀರ್ ಅವರು ಪುತ್ರ ಇಯಾಝ್ ಮತ್ತು ಅಳಿಯ ಲತೀಫ್, ಸಂಬಂಧಿ ಇಮ್ರಾನ್ ಜೊತೆ ಬ್ಯಾಂಕ್ ತೆರಳಿ ವಾಪಾಸ್ ಆಗುತ್ತಿದ್ದಾಗ ಅಲ್ಲೇ ಮುಂಭಾಗ ಕಾರ್ ನಲ್ಲಿದ್ದಾಗ ಸ್ಥಳಕ್ಕೆ ಬಂದ ಯುವ ಕಾಂಗ್ರೆಸ್ ಮೂಲ್ಕಿ ವಲಯಾಧ್ಯಕ್ಷ ಹಕೀಮ್ ಮತ್ತು ಆತನ ಸಹಚರರಾದ ವಫಾ, ಅಸಿಮ್, ಸಿದ್ದಿಕ್, ನಿಸಾರ್, ಸಕ್ಕರೆ ಬಾವಾ, ಫರಾನ್, ರಾಝೀಮ್ ಮತ್ತು ಸಿದ್ದಿಕ್ ಏಕಾಏಕಿ ಕಾರ್ ತಡೆದು ಸೋಡಾ ಬಾಟಲಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಅಬ್ದುಲ್ ಲತೀಫ್ ಸಾವನ್ನಪ್ಪಿದ್ದು ಇಯಾಜ್ ಮತ್ತು ಮುನೀರ್ ಗಂಭೀರ ಗಾಯಗೊಂಡಿದ್ದರು.

ಜಾಹೀರಾತು

ಯುವ ಕಾಂಗ್ರೆಸ್ ಮುಖಂಡ ಹಕೀಮ್ ಮತ್ತು ಮುನೀರ್ ಮಧ್ಯೆ ಹಳೆಯ ವೈಷಮ್ಯವಿದ್ದು ಈ ಕಾರಣದಿಂದ ದಾಳಿ ನಡೆಸಿರುವುದು ದೃಢಪಟ್ಟಿದೆ. ದುಷ್ಕರ್ಮಿಗಳು ಮುನೀರ್‍ನನ್ನು ಟಾರ್ಗೆಟ್ ಮಾಡಿಕೊಂಡಿದ್ದು ಅಡ್ಡ ಬಂದ ಆತನ ಅಳಿಯ ಲತೀಫ್ ದಾರುಣ ಸಾವನ್ನಪ್ಪಿದ್ದಾರೆ.