Friday, September 20, 2024
ಸುದ್ದಿ

ಹಿಂದೂಗಳ ಮೀ‌ನು, ತರಕಾರಿ – ಹಣ್ಣುಗಳ ವ್ಯಾಪಾರದ ಅಂಗಡಿಗಳ ತೆರವಿಗೆ ಮುಂದಾದ ನಗರಸಭೆ ; ಲೈಸೆನ್ಸ್ ಇಲ್ಲದ ಅನ್ಯಮತೀಯರ ಮೀನಿನ ಅಂಗಡಿ, ಹಣ್ಣಿನ ಗಾಡಿ ಯಾಕೆ ನಿಮಗೆ ಕಾಣುವುದಿಲ್ಲ..!? – ಯಾವುದೇ ಹಿಂದೂವಿನ ಅಂಗಡಿಯನ್ನು ಅನಧಿಕೃತ ಎಂದು ತೆರವುಗೊಳಿಸಿದರೆ ನಗರಸಭೆಗೆ ಮುತ್ತಿಗೆ – ಹಿಂಜಾವೇ ಎಚ್ಚರಿಕೆ – ಕಹಳೆ ನ್ಯೂಸ್

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಅಂಗಡಿಗಳ ತೆರವಿಗೆ ಮುಂದಾದ ಪುತ್ತೂರು ನಗರಸಭೆ ಜೂ.6ರಂದು ರಸ್ತೆ ಬದಿಯಲ್ಲಿ ತರಕಾರಿ, ಮೀನು ವ್ಯಾಪಾರದ ಅಂಗಡಿಗಳಿಗೆ ತೆರಳಿ ಎಚ್ಚರಿಕೆ ನೀಡಿದ ಮತ್ತು ನಮ್ಮದೊಂದೇ ಅಂಗಡಿ ಗುರಿ ಮಾಡುವುದಲ್ಲ ನಗರಸಭೆ ವ್ಯಾಪ್ತಿಯಲ್ಲಿರುವ ಅನೇಕ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಎಂದು ಅಂಗಡಿಯವರೊಬ್ಬರು ಆಗ್ರಹಿಸಿದ ಘಟನೆ ಏಳ್ಮುಡಿಯಲ್ಲಿ ನಡೆದಿದೆ.

ಪರ್ಲಡ್ಕ, ದರ್ಬೆ ಸೇರಿದಂತೆ ಅನೇಕ ಕಡೆ ಅನಧಿಕೃತ ಮೀನಿನ ಅಂಗಡಿಗಳು ಕಾರ್ಯಾಚರಿಸುತ್ತಿವೆ ಎಂದು ನಗರಸಭೆ ಅಧಿಕಾರಿಗಳು ಅನಧಿಕೃತ ಅಂಗಡಿಗಳಿಗೆ ತೆರಳಿ ತೆರವುಗೊಳಿಸುವಂತೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಈ ನಡುವೆ ಮೀನು ವ್ಯಾಪಾರದ ಅಂಗಡಿಯೊಬ್ಬರು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅದೆಷ್ಟೋ ಅನಧಿಕೃತ ಅಂಗಡಿಗಳಿವೆ ಅದನ್ನು ಮೊದಲು ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ. ಆದರೆ ನಗರಸಭೆ ಅಧಿಕಾರಿಗಳು ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿ ತೆರಳಿದ್ದಾರೆಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರಸಭೆಗೆ ಮುತ್ತಿಗೆ – ಹಿಂಜಾವೆ ಎಚ್ಚರಿಕೆ:

ಜಾಹೀರಾತು

ಹಿಂದೂಗಳ ಮೀ‌ನು, ತರಕಾರಿ – ಹಣ್ಣುಗಳ ವ್ಯಾಪಾರದ ಅಂಗಡಿಗಳ ತೆರವಿಗೆ ಮುಂದಾದ ನಗರಸಭೆ ನಡೆ ಖಂಡನೀಯ. ಲೈಸೆನ್ಸ್ ಇಲ್ಲದ ಅನ್ಯಮತೀಯರ ಮೀನಿನ ಅಂಗಡಿ, ಹಣ್ಣಿನ ಗಾಡಿ ಯಾಕೆ ನಿಮಗೆ ಕಾಣುವುದಿಲ್ಲ..!? – ಯಾವುದೇ ಹಿಂದೂವಿನ ಅಂಗಡಿಯನ್ನು ಅನಧಿಕೃತ ಎಂದು ತೆರವುಗೊಳಿಸಿದರೆ ನಗರಸಭೆಗೆ ಮುತ್ತಿಗೆ ಹಾಕುವುದಾಗಿ ಹಿಂಜಾವೇ ಎಚ್ಚರಿಕೆ ನೀಡಿದೆ.