Wednesday, January 22, 2025
ಸಿನಿಮಾಸುದ್ದಿ

ಮೇಘಾನಾ ರಾಜ್ ತಾಯಿ ಆಗ್ತಿದ್ದಾರೆ ; ಪುಟ್ಟ ಚಿರಂಜೀವಿ ಬರ್ತಿದ್ದಾನೆ ಎಂದ ತಾರಾ – ಕಹಳೆ ನ್ಯೂಸ್

ಬೆಂಗಳೂರು : ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂದು ಹಿರಿಯ ನಟಿ ತಾರಾ ಅನುರಾಧಾ ಹೇಳಿದ್ದಾರೆ.

ಚಿರಂಜೀವಿ ಸಾವಿನ ವಿಷಯ ತಿಳಿದು ಆಸ್ಪತ್ರೆ ಬಳಿ ಓಡೋಡಿ ಬಂದ ತಾರಾ ಮಾಧ್ಯಮಗಳ ಜೊತೆ ಮಾತನಾಡಿದರು. ಮೊದಲು ಸುಳ್ಳು ಸುದ್ದಿ ಅಂತಾ ತಿಳಿದೆ. ನಂತರ ಸುಳ್ಳು ಸುದ್ದಿ ಆಗಲಿ ಅಂತಾ ಅಂದುಕೊಂಡು ಆಸ್ಪತ್ರೆಗೆ ಬಂದೆ. ಆದ್ರೆ ಚಿರು ಹೃದಯಾಘಾತದಿಂದ ಸಾವನ್ನಪ್ಪಿರೋದು ಖಚಿತವಾಯ್ತು. ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ ಎಂದು ಕಣ್ಣೀರು ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಮೇಘಾನಾ ರಾಜ್ ತಾಯಿ ಆಗ್ತಿದ್ದಾರೆ. ಪುಟ್ಟ ಚಿರಂಜೀವಿ ಬರುತ್ತಿದ್ದಾನೆ ಎಂಬ ವಿಷಯವನ್ನು ತಿಳಿಸಿದರು. ಹಿರಿಯ ನಟ ಸುಂದರ್ ರಾಜ್ ಮತ್ತು ಪರಿಮಳಾ ಜೋಶಿ ದಂಪತಿಯ ಪುತ್ರಿಯಾಗಿರೋ ಮೇಘನಾ ಮತ್ತು ಚಿರಂಜೀವಿ ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು ಮದುವೆ ಆಗಿದ್ದರು.