Wednesday, January 22, 2025
ಸುದ್ದಿ

ಲಾಕ್ ಡೌನ್ ನಂತರ ಜೂನ್ 8 ರಿಂದ ರಾಜ್ಯಾದ್ಯಂತ ದೇವಸ್ಥಾನ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ; ಹತ್ತೂರ ಒಡೆಯ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಕಲ ಸಿದ್ಧತೆ – ಕಹಳೆ ನ್ಯೂಸ್

ಪುತ್ತೂರು: ಕೊರೋನ ಮಹಾಮಾರಿಯಿಂದಾಗಿ ಭಕ್ತಾಧಿಗಳಿಗೆ ದೇವಳದ ಪ್ರವೇಶಾವಕಾಶ ನಿರ್ಬಂದಿಸಲ್ಪಟ್ಟ ಬಳಿಕ ಜೂ. 8ರಿಂದ ಭಕ್ತರಿಗೆ ಕೆಲವೊಂದು ನಿಬಂದನೆಗಳೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ದೇವರ ದರ್ಶನ ಭಾಗ್ಯವನ್ನು ಧಾರ್ಮಿಕ ದತ್ತಿ ಇಲಾಖೆಯು ಅವಕಾಶ ಮಾಡಿಕೊಟ್ಟಿದ್ದು, ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೆಲವೊಂದು ಕಡ್ಡಾಯ ನಿಯಮಗಳನ್ನು ಪಾಲಿಸುವಂತೆ ಸರಕಾರದ ಆದೇಶಕ್ಕೆ ತಕ್ಕಂತೆ ಜೂ.7ರಂದು ದೇವಳದ ಸಿಬಂದಿಗಳು ಮತ್ತು ನಿತ್ಯ ಕರಸೇವಕರು ಸಿದ್ಧತೆ ಮಾಡಿದ್ದಾರೆ.

ಬೆಳಿಗ್ಗಿನಿಂದ ಸಂಜೆಯ ತನಕ ದೇವಳದ ಶುಚಿತ್ವ, ಮಾರ್ಕಿಂಗ್ ಕಾರ್ಯ ನಡೆಯಿತು. ದೇವಳದ ನಿತ್ಯ ಕರಸೇವಕರಾದ ಹರೀಶ್ ಪೈ ನೇತೃತ್ವದಲ್ಲಿ ದೇವಳದ ರಾಜಗೋಪುರ, ಒಳಾಂಗಣ, ಹೋರಾಂಗಣ ಸುತ್ತುಗಳಿಗೆ ನೀರು ಹಾಕಿ ಶುಚಿಗೊಳಿಸಲಾಯಿತು. ಭಕ್ತರು ದೇವಳದ ಒಳಾಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಮಧ್ಯಾಹ್ನದ ವೇಳೆ ಮಾರ್ಕಿಂಗ್ ಮಾಡಲಾಯಿತು. ದೇವಳದ ದ್ವಾರಗೋಪುರ ಮತ್ತು ದ್ವಾರವನ್ನು ಹೂವಿನಿಂದ ಅಲಂಕರಿಸಲಾಯಿತು. ಜೂ. 8 ಸೋಮವಾರದ ಆಗಿದ್ದರಿಂದ ಪ್ರತಿ ಸೋಮವಾರದಂತೆ ಎಲ್ಲಾ ಗುಡಿ ಗೋಪುರಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಯಿತು. ದೇವಳದ ಸಿಬಂದಿಗಳಾದ ಪದ್ಮನಾಭ, ಯಶವಂತ ಸಹಕರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಛೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು