ಮಂಗಳೂರಿನಲ್ಲಿ ಜುಗಾರಿ ಅಡ್ಡೆಗೆ ಪೋಲೀಸ್ ದಾಳಿ ಮುಹಮ್ಮದ್ ಅನ್ವರ್ ಸಹಿತ 14 ಮಂದಿ ಬಂಧನ ; 1.75 ನಗದು ವಶಕ್ಕೆ – ಕಹಳೆ ನ್ಯೂಸ್
ಮಂಗಳೂರು, ಜೂ 08 : ನಗರದ ಬಿಜೈ ಆನೆಗುಂಡಿ 2ನೇ ತಿರುವಿನ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್‌ನಲ್ಲಿ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ನಗರ ಅಪರಾಧ ಪತ್ತೆ ದಳ (ಸಿಸಿಬಿ)ಮತ್ತು ಉರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಮುಖ ಆರೋಪಿ ಪೋರ್ತ್‌ಮೈಲ್‌ನ ಚೇತನ್ ಕುಮಾರ್ ಸಹಿತ 14 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 1,75,200 ರೂ., 18 ಮೊಬೈಲ್, 52 ಇಸ್ಪೀಟ್ ಎಲೆಗಳನ್ನು, ಬೆಡ್ ಶೀಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಪೋರ್ತ್‌ಮೈಲ್‌ನ ಚೇತನ್ ಕುಮಾರ್ ನೇತೃತ್ವದಲ್ಲಿ ಜುಗಾರಿ ಆಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್‌ಐ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಕೂಳೂರು ಚೇತನ್‌ಕುಮಾರ್, ಉಡುಪಿಯ ಕಲ್ಸಂಗದ ನಿಖಿಲ್, ಬರ್ಕೆಯ ಚೇತನ್, ಅಶೋಕನಗರದ ಧೀರಜ್, ದಂಬೇಲ್‌ನ ಸಚಿನ್, ಚೊಕ್ಕಬೆಟ್ಟುವಿನ ಸುರೇಂದ್ರ ಭಂಡಾರಿ, ಕಾನಕತ್ಲ ಮುಹಮ್ಮದ್ ಅನ್ವರ್, ಬೆಂಗರೆ ಮುಹಮ್ಮದ್ ಜುಬೈರ್, ಕಾವೂರಿನ ನಾಗೇಶ್ ಶ್ರೀಯಾನ್, ಕುಳಾಯಿ ಭರತೇಶ್ ಶ್ರೀಯಾನ್, ಜೋಕಟ್ಟೆಯ ಮುಹಮ್ಮದ್ ಇಮ್ರಾನ್, ಕೊಣಾಜೆ ಮುಹಮ್ಮದ್ ಅನ್ವರ್, ಬಂಗ್ರ ಕೂಳೂರಿನ ಹೇಮಂತ್, ಕುಂಜತ್ತಬೈಲ್‌ನ ಸತೀಶ್ ಪೂಜಾರಿ ಎಂದು ಗುರುತಿಸಲಾಗಿದೆ.
ಲಾಕ್ ಡೌನ್ ಹಿನ್ನಲೆಯಲ್ಲಿ ಕ್ಲಬ್ ಗಳು ಇತ್ತೀಚೆಗೆ ಬಂದ್ ಆಗಿದ್ದು , ಈ ಹಿಂದೆ ಕ್ಲಬ್ ಗಳಲ್ಲಿ ಭಾಗವಹಿಸುತ್ತಿದ್ದವರು ಈಗ ಅಲ್ಲಲ್ಲಿ ಅಯ್ದ ಜಾಗದಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದಾರೆ.