MAHESH KAJE
ಬೆಂಗಳೂರು : ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಮೇಲಿನ ಹಲ್ಲೆ ಖಂಡಿಸಿ ಹೇಳಿಕೆ ನೀಡಿದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಇದರ ಮಾಜಿ ಸದಸ್ಯರು ಹಾಗೂ ಪುತ್ತೂರು ವಕೀಲರ ಸಂಘ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಮಹೇಶ್ ಕಜೆ ಹಲ್ಲೆಯನ್ನು ಖಂಡಿಸಿದ್ದಾರೆ.
ಸಂವಿಧಾನದ ಮೇಲೆ ನಡೆದ ಹಲ್ಲೆ ಎಂದು ವಿಶ್ಲೇಸಿಸಿದ ಅವರು ನ್ಯಾಯಾಂಗ ಮತ್ತು ಈಡೀ ವಕೀಲರು ಸುಮುದಾಯ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಯಾಕೆಂದರೆ, ಇದು ಆರಂಭವಲ್ಲ , ಉಡುಪಿಯಲ್ಲಿ ಒಬ್ಬ ನ್ಯಾಯವಾದಿ ಕೋರ್ಟು ಕಮಿಷನ್ನಿಗೆ ಹೊದ ಸಂದರ್ಭದಲ್ಲಿ ಹಲ್ಲೆ ನಡೆಯುತ್ತದೆ. ಕಾನೂನನ್ನು ರಕ್ಷಿಸುವ ಸಲುವಾಗಿ ತನ್ನ ಕಕ್ಷಿದಾರರ ಪರವಾಗಿ ಪೋಲೀಸು ಠಾಣೆಗೆ ಹೋದ ವಕೀಲರ ಮೇಲೆ ಮೈಸೂರಿನಲ್ಲಿ ಹಲ್ಲೆ ನಡೆಯುತ್ತದೆ. ಇದಕ್ಕೆಲ್ಲ ಕಲಶಪ್ರಾಯವಾಗಿ ನ್ಯಾಯದಾನವನ್ನು ಮಾಡುವಂತಹ ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಹಲ್ಲೆ ನಡೆದಿದೆ. ನಾವೆತ್ತ ಸಾಗುತ್ತಿದ್ದೇವೆ? ನಾವೆಲ್ಲರೂ ಎಲ್ಲವನ್ನೂ ಮರೆತು ಒಕ್ಕೊರಲಿನಿಂದ ಇದನ್ನು ಖಂಡಿಸಬೇಕು ಎಂದು ಹೇಳಿದರು.
ವರದಿ : ಕಹಳೆ ನ್ಯೂಸ್