Thursday, January 23, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಸಾವರ್ಕರ್ ಫ್ಲೆಕ್ಸ್ ವಾರ್..! ಪುತ್ತೂರಿನ ಬೊಳ್ವಾರಿನ ವೃತ್ತಕ್ಕೆ ವೀರ ಸಾವರ್ಕರ್ ವೃತ್ತ ನಾಮಫಲಕ ಅಳವಡಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು – ಕಹಳೆ ನ್ಯೂಸ್

ಪುತ್ತೂರು : ದಕ್ಷಿಣ ಕನ್ನಡ‌ ಜಿಲ್ಲೆಯ ಪುತ್ತೂರಿನ ಬೊಳ್ವಾರಿನಲ್ಲಿ ಹಿಂದೂ ಪರ‌ ಸಂಘಟನೆಯ ಕಾರ್ಯಕರ್ತರು ಬೊಳ್ವಾರು ಜಂಕ್ಷನ್ನಲ್ಲಿರುವ ವೃತ್ತಕ್ಕೆ ವೀರ ಸಾವರ್ಕರ ವೃತ್ತ ಎಂಬ ನಾಮಫಲಕ ಆಳವಡಿಸಿದ್ದಾರೆ.

ಕೆಲದಿನಗಳ ಹಿಂದೆ ಯಲಹಂಕದ ಬಯಲು ಸೇತುವೆಗೆ ವೀರ ಸಾವರ್ಕರ್ ಎಂಬ ಹೆಸರಿಡುವ ಬಗ್ಗೆ ವಿವಾದ ಉಂಟಾಗಿತ್ತು. ಸರಕಾರ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಆ ನಂತರ ಮಂಗಳೂರಿನಲ್ಲಿ ಪಂಪ್ವೆಲ್ ಮೇಲುಸೇತುವೆಗೆ ಹಿಂದೂಪರ ಸಂಘಟನೆಗಳು ವೀರ ಸಾವರ್ಕರ್ ಮೇಲುಸೇತುವೆ ಎಂಬ ಫಲಕವನ್ನು ಹಾಕಿದ್ದರು, ಇವತ್ತು ಪುತ್ತೂರಿನಲ್ಲಿ ವೀರಸಾವರ್ಕರ್ ವೃತ್ತ ಎಂದು ನಾಮಕರಣ ಮಾಡ ನಾಮ ಫಲಕ ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು