Thursday, January 23, 2025
ಸುದ್ದಿ

ಮುಳಿಯ ಜ್ಯುವೆಲ್ಸ್‍ನಿಂದ ಚಿನ್ನಾಭರಣಗಳ ವರ್ಚುವಲ್ ಶೋರೂಂನಲ್ಲಿ ಲೈವ್ ಚಿನ್ನಾಭರಣ ಖರೀದಿ ಸೌಲಭ್ಯ ; ವಿನೂತನ ಪ್ರಯತ್ನಕ್ಕೆ ಮುಂದಾದ ಮುಳಿಯ ಸಂಸ್ಥೆ – ಕಹಳೆ ನ್ಯೂಸ್

ಪುತ್ತೂರು : ಜೂ 9: ಸದಾ ಹೊಸತನಕ್ಕೆ ಹೆಸರಾದ ಮುಳಿಯ ಜ್ಯುವೆಲ್ಸ್ ‘ಲೈವ್‍ಯುತವಾಗಿ ಖರೀದಿ’ ಸೌಲಭ್ಯ ಆರಂಭಿಸಿದೆ . ಕೊರೊನಾದ ನಂತರ ಜವಾಬ್ದಾರಿಯಲ್ಲಿ ವ್ಯವಹರಿಸುವ ನಿಟ್ಟಿನಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಸಫಲವಾಗಿದ್ದು ಗ್ರಾಹಕರ ಮೆಚ್ಚುಗೆ ಪಡೆಯುತ್ತಿದೆ.

ಗ್ರಾಹಕರು ತಮ್ಮ ತಮ್ಮ Mobile/ Tab/ Google meet/ Zoom/ Whatsapp/ Video chat ಮೂಲಕ online ಮಳಿಗೆಯನ್ನು Laptop/Mobile ನಲ್ಲಿ ಕಣ್ಣೆದುರು ನೋಡಿ ಆಭರಣಗಳ ಶ್ರೇಣಿಯನ್ನು ಆನಂದಿಸಬಹುದು, ಮಾತುಕತೆ ನಡೆಸಿ ನಮ್ಮ ಸೇಲ್ಸ್ ಸಿಬ್ಬಂದಿಗಳ ಜೊತೆ ಆಭರಣಗಳ ಕುರಿತು ಸಂಪೂರ್ಣ ವಿವರ,ಪ್ರಾತ್ಯಕ್ಷಿಕೆ ಪಡೆಯಬಹುದು. ಹಾಗೆಯೇ online ಪಾವತಿ ಮಾಡಿ ಆಭರಣವನ್ನು ಮನೆಯಲ್ಲಿಯೇ ಕೂತು ಪಡೆಯಬಹುದು. ನಮ್ಮ ಶೋರೂಂ ಪ್ರದೇಶದಲ್ಲಿ ಡೋರ್ ಡೆಲಿವರಿ, ದೂರದ ಪ್ರದೇಶಗಳಿಗೆ ಇನ್ಸುರೆನ್ಸ್ ಕೊರಿಯರ್ ಮೂಲಕ ತಲುಪಿಸಲಾಗುವುದು.
65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಪುಟಾಣಿಗಳನ್ನ ಮನೆಯಿಂದಲೇ ಚಿನ್ನಾಭರಣ ಖರೀದಿಯಲ್ಲಿ ತೊಡಗಿಸುವುದರಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಈಗಾಗಲೇ ದಿನಕ್ಕೆ ಹಲವಾರು ಮಂದಿ ನಮ್ಮ ವರ್ಚುವಲ್ ಶೋರೂಂ ನ ಲೈವ್ online ಖರೀದಿಯನ್ನು ಇóಷ್ಟಪಟ್ಟು ನಮ್ಮನ್ನು ಹುರಿದುಂಬಿಸಿ ಹರಸಿದ್ದಾರೆ. ಕೊರೊನಾ ಜೊತೆ ಬದುಕಬೇಕಾದದ್ದು “ಹೊಸ ಸಾಮಾನ್ಯ ಜೀವನ” ಆಗಿರುವುದರಿಂದ ಇದು ಖಂಡಿತಾ ಅಗತ್ಯ” ಎನ್ನುತ್ತಾರೆ ಶ್ರೀ ಕೇಶವ ಪ್ರಸಾದ್ ಮುಳಿಯರವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸೌಲಭ್ಯವು ದಿನಾಂಕ 10-06-2020ನೇ ಬುಧವಾರದಂದು ವಿದ್ಯುಕ್ತವಾಗಿ ಚಾಲನೆಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಶ್ರೀ ವಿಜಯ್ ಹಾರ್ವಿನ್ ಮತ್ತು ಪ್ರಥಮ ಖರೀದಿದಾರರಾಗಿ ಶ್ರೀಮತಿ ಅನುಪಮಾ ಶಿವರಾಮ್ ಇವರು ಆನ್‍ಲೈನ್ ಮೂಲಕ ಭಾಗವಹಿಸಲಿದ್ದಾರೆ. ಗ್ರಾಹಕರು ಮತ್ತು ಹಿತೈಷಿ ಬಂಧುಗಳು Fb ಮತ್ತು zoom app ಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿ.