Thursday, January 23, 2025
ಸುದ್ದಿ

ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ- ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ಸಮಾವೇಶದಲ್ಲಿ ಪಾಕಿಸ್ತಾನದ ಪರವಾಗಿ ಕೂಗಿ ಕೆಂಗಣ್ಣಿಗೆ ಗುರಿಯಾಗಿದ್ದ ಅಮೂಲ್ಯ ಲಿಯೋನಾಗೆ ನ್ಯಾಯಾಲಯ​ ಇಂದು ಜಾಮೀನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯ ಈಕೆಗೆ ಜೈಲೇ ಗತಿಯಾಗಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಸಿಎಎ, ಎನ್‌ಆರ್‌ಸಿ ವಿರೋಧಿಸಿ ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಸಮಾವೇಶದಲ್ಲಿ ಅಮೂಲ್ಯಾ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಳು. ಈ ಸಮಾವೇಶವು ಫೆಬ್ರುವರಿ 20ರಂದು ನಡೆದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣ ಸಂಬಂಧ ಆಕೆಯನ್ನು ಬಂಧಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಬಳಿಕ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿದ್ದಾರೆ.

 

ಈಕೆಗೆ ಜಾಮೀನು ನೀಡದಂತೆ ಮಾಡಿರುವ ವಾದವನ್ನು ಕೋರ್ಟ್​ ಪುರಸ್ಕರಿಸಿದೆ. ದೇಶದ್ರೋಹದ ಕೆಲಸ ಮಾಡಿರುವ ಅಮೂಲ್ಯನಿಗೆ ಜಾಮೀನು ಸಿಕ್ಕರೆ ಆಕೆ ಬೇರೆ ಅಪರಾಧಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ, ಮಾತ್ರವಲ್ಲದೇ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ವಾದವನ್ನು ಕೋರ್ಟ್​ ಮಾನ್ಯ ಮಾಡಿದೆ.

 

 

ಫೆಬ್ರುವರಿಯಲ್ಲಿ ನಡೆದ ಸಮಾವೇಶದಲ್ಲಿ ಅಮೂಲ್ಯಾ, ಪಾಕಿಸ್ತಾನ್ ಜಿಂದಾಬಾದ್ ಎಂದ ಕೆಲವೇ ಕ್ಷಣಗಳಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಬದಲಾಯಿಸಿದ್ದಳು. ಆಕೆಯ ಕೈಲಿದ್ದ ಮೈಕನ್ನು ಕಸಿದುಕೊಳ್ಳಲಾಗಿತ್ತು. ಈಕೆಯ ವಿರುದ್ಧ ಬಲವಾದ ವಿರೋಧಗಳು ವ್ಯಕ್ತವಾಗುತ್ತಿದ್ದಂತೆಯೇ, ನಾನು ಹೇಳಲು ಹೊರಟಿದ್ದೇ ಬೇರೆ. ಅದನ್ನು ಹೇಳಲು ನನಗೆ ಅವಕಾಶ ಕೊಡಲಿಲ್ಲ, ಮೈಕ್​ ಕಿತ್ತುಕೊಂಡರು ಎಂದು ಹೇಳಿದ್ದಳು.

 

20 ವರ್ಷದ ಅಮೂಲ್ಯಾ ಚಿಕ್ಕಮಗಳೂರಿನ ಕೊಪ್ಪದ ನಿವಾಸಿ. ಎಡಪಂಥೀಯ ಚಿಂತಕಿ ಎಂದು ಕರೆಸಿಕೊಂಡಿರುವ ಈಕೆ, ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ ಎಂಬ ಆರೋಪವಿದೆ.