ಕರ್ನಾಟಕದಿಂದ ಕೇರಳಕ್ಕೆ ಗೋವುಗಳ ಸಾಗಾಟ ; ತೌಸೀಫ್ , ಮೊಹಮ್ಮದ್, ಎಂ. ಅಬ್ದುಲ್ಲಾ ಹೆಡೆಮುರಿಕಟ್ಟಿದ ಸಂಪ್ಯ ಪೋಲೀಸರು – ಗೋಕಳ್ಳರಿಗೆ ಸಿಂಹ ಸ್ವಪ್ನರಾದ ಸಂಪ್ಯ ಎಸ್.ಐ. ಉದಯರವಿ – ಕಹಳೆ ನ್ಯೂಸ್
ಪುತ್ತೂರು: ಮಾಂಸ ಮಾಡುವ ಉದ್ದೇಶದಿಂದ ಕೇರಳಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗಸ್ತು ತಿರುಗುತ್ತಿದ್ದ ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಪಾಣಾಜೆಯ ಗುರಿಕೆಕಲ್ಲು ಎಂಬಲ್ಲಿ ನಾಲ್ಕು ಗೋವುಗಳನ್ನು ರಕ್ಷಣೆ ಮಾಡಿದ್ದು, ನಾಲ್ಕು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಕಯಿಪ್ಪಾಡಿ ಗ್ರಾಮದ ಕುಂಬ್ಳೆ ಬದ್ರಿಯಾ ನಗರದ ಮಹಮ್ಮದ್ ಎಂಬವರ ಪುತ್ರ ತೌಸೀಫ್(೩೫ವ), ಕಾಸರಗೋಡು ಕುಂಬ್ಳೆ ಮೊಗ್ರಲ್ ನಿವಾಸಿ ಮೊಹಮ್ಮದ್(೪೯ವ), ಕಾಸರಗೋಡು ಬದ್ರಿಯಾ ನಗರದ ಎಂ.ಅಬ್ದುಲ್ಲಾ(೫೫ವ), ಪಿಕಪ್ ಜೀಪು ಚಾಲಕ ಆರ್ಲಪದವು ನಿವಾಸಿ ಉಮ್ಮರ್ ಆರೋಪಿಗಳಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಘಟನೆ ವಿವರ: ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಉದಯ ರವಿ ಅವರು ಸಿಬ್ಬಂದಿಗಳೊಂದಿಗೆ ಪಾಣಾಜೆ ಗ್ರಾಮದ ಒಡ್ಯ ಎಂಬಲ್ಲಿ ರೌಂಡ್ಸ್‌ನಲ್ಲಿದ್ದ ವೇಳೆ ಪಾಣಾಜೆ ಗ್ರಾಮದ ಗುರಿಕೆಕಲ್ಲು ಎಂಬಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಜಾನುವಾರುಗಳನ್ನು ಶಿಫ್ಟ್ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದು ವಿಚಾರಿಸಲು ಹೋದಾಗ ಪಿಕಪ್ ಜೀಪು ಚಾಲಕ ಪಿಕಪ್‌ನೊಂದಿಗೆ ಪರಾರಿಯಾಗಿದ್ದ. ಜಾನುವಾರು ಇದ್ದ ವಾಹನದ ಚಾಲಕ ಉಮ್ಮರ್ ಅವರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾಂಸಕ್ಕಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ತಿಳಿದು ಬಂದಿತು. ಘಟನೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಗೋವುಗಳನ್ನು ಮತ್ತು ದೋಸ್ತ್ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.