Recent Posts

Tuesday, January 21, 2025
ಸುದ್ದಿ

ಕೈಗೆ ಕಿಸ್ ಕೊಟ್ಟು ಕೊರೊನಾ ಓಡಿಸುತ್ತೇನೆಂದ `ಬಾಬಾ’ ವೈರಸ್ ಗೆ ಬಲಿ!-ಕಹಳೆ ನ್ಯೂಸ್

ಮಧ್ಯಪ್ರದೇಶ : ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಕೊರೊನಾ ವೈರಸ್ ಗೆ ಔಷಧಿ ಕಂಡುಹಿಡಿಯಲು ವಿಶ್ವದ ಅನೇಕ ರಾಷ್ಟ್ರಗಳು ಪ್ರಯತ್ನ ಪಡುತ್ತಿವೆ. ಆದರೆ ಮಧ್ಯಪ್ರದೇಶದಲ್ಲಿ ಬಾಬಾನೊಬ್ಬ ಕೈಗೆ ಮುತ್ತು ಕೊಡುವ ಮೂಲಕ ಕೊರೊನಾ ಓಡಿಸುತ್ತೇನೆ ಎಂದು ಹೇಳಿ ಕೊನೆಗೆ ತಾನೇ ಕೊರೊನಾ ವೈರಸ್ ಗೆ ಬಲಿಯಾಗಿದ್ದಾನೆ.

ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಬಾಬಾ ಕೈಗೆ ಮುತ್ತು ಕೊಟ್ಟರೆ ಕೊರೊನಾ ಹೋಗುತ್ತದೆ ಎಂದು ನಂಬಿಸಿ ಅನೇಕ ಮಂದಿಗೆ ಮುತ್ತುಕೊಟ್ಟಿದ್ದ. ಈತನಿಂದ ಮುತ್ತು ಪಡೆದಿರುವ 85 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಬಾಬಾ ತಾನೊಬ್ಬ ದೇವ ಮಾನವ, ಪವಿತ್ರ ಮನುಷ್ಯ ಎಂದು ಜನರನ್ನು ನಂಬಿಸಿ ತಾನು ಕೈಗೆ ಮುತ್ತು ಕೊಟ್ಟರೆ ಕೊರೊನಾ ವೈರಸ್ ಹೋಗುತ್ತದೆ ಎಂದು ಹೇಳಿದ್ದ. ಈತನ ಮಾತನ್ನು ನಂಬಿದ ಅನೇಕ ಜನರು ಈತನಿಂದ ಮುತ್ತು ಕೊಡಿಸಿಕೊಳ್ಳಲು ಬರುತ್ತಿದ್ದರು. ಬಳಿಕ ಬಾಬಾನಿಗೆ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾನೆ.