Sunday, November 24, 2024
ಸುದ್ದಿ

ಉಪ್ಪಿನಂಗಡಿ :ಬಾರ್ಯ ಕುಡಿವ ನೀರಿನ ಬಿಲ್‌ ಅವ್ಯವಹಾರ ಪ್ರಕರಣ; ಪಿಡಿಒ ಸಹಿತ ಒಂಬತ್ತು ಮಂದಿಗೆ ದಂಡ-ಕಹಳೆ ನ್ಯೂಸ್

 ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಪಂನಲ್ಲಿ 2017-18ನೇ ಸಾಲಿನಲ್ಲಿ ರಶೀದಿ ಪುಸ್ತಕಗಳ ದುರುಪಯೋಗಪಡಿಸಿಕೊಂಡು ಅವ್ಯವಹಾರ ನಡೆಸಿರುವ ಪ್ರಕರಣವನ್ನು ತನಿಖೆ ನಡೆಸಿರುವ ದ.ಕ. ಜಿಲ್ಲಾ ಪಂಚಾಯಿತಿಯು ಗ್ರಾಪಂ ಪಿಡಿಒ ಸಹಿತ 6 ಸಿಬ್ಬಂದಿಯನ್ನು ತಪ್ಪಿತಸ್ಥರೆಂದು ತಿಳಿಸಿ, 10,92,108 ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅದರ ಶೇ.15 ಬಡ್ಡಿ ಹಣ 4,55,861 ರೂ. ಪಾವತಿಸುವಂತೆ ಆದೇಶಿಸಿದೆ.2016-17 ಮತ್ತು 2017-18ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಗ್ರಾಪಂನಲ್ಲಿ ರಶೀದಿ ಪುಸ್ತಕಗಳನ್ನು ದುರುಪಯೋಗಪಡಿಸಿ ನೀರಿನ ವಸೂಲಿಯಲ್ಲಿ ಕ್ರಮವಾಗಿ 6,92,377 ರೂ. ಮತ್ತು 3,99,731 ರೂ. ಸೇರಿದಂತೆ ಒಟ್ಟು 10,92108 ರೂ. ಮೊತ್ತವನ್ನು ಬ್ಯಾಂಕ್‌ನಲ್ಲಿರುವ ಸಂಬಂಧಿಸಿದ ಖಾತೆಗೆ ಜಮೆ ಮಾಡದಿರುವುದು ಕಂಡು ಬಂದಿದೆ. ಇಲ್ಲಿ ಹಣದ ದುರುಪಯೋಗ ನಡೆದಿರುವ ಬಗ್ಗೆ ಸಾರ್ವಜನಿಕರ ದೂರು ಬಂದ ಬಳಿಕ ಈ ಮೊತ್ತವನ್ನು ವಸೂಲಿ ಮಾಡಿ ನೀರಿನ ಖಾತೆಗೆ ಜಮೆ ಮಾಡಲು ಆದೇಶಿಸಲಾಗಿತ್ತು.

ಅದರಂತೆ ಈ ಹಣವನ್ನು 10 ಕಂತುಗಳಲ್ಲಿ ಪಾವತಿ ಮಾಡಲಾಗಿತ್ತು. ಆದರೆ ದುರುಪಯೋಗಪಡಿಸಿದ ಮೊಬಲಗಿಗೆ ಶೇ.15ರಷ್ಟು ಬಡ್ಡಿ ಪಾವತಿ ಆಗದೇ ಇದ್ದ ಕಾರಣ ವಸೂಲಿ ಆದ ದಿನಾಂಕದಿಂದ ಬಾಕಿಯಾದ ಮೊಬಲಗಿನ ಮೇಲೆ ಶೇ.15ರಷ್ಟು ಬಡ್ಡಿಯನ್ನು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಯಿಂದ ವಸೂಲಿ ಮಾಡಿ ಪಂಚಾಯಿತಿ ಜಮೆ ಮಾಡಿದ ಬಗ್ಗೆ ಸೂಕ್ತ ದಾಖಲೆಯೊಂದಿಗೆ ವರದಿ ನೀಡುವಂತೆ ಬೆಳ್ತಂಗಡಿ ತಾಪಂ ಕಾರ್ಯ ನಿರ್ವಹಣಾಧಿಕಾರಿಗೆ ಸೂಚನೆ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಬೆಳ್ತಂಗಡಿ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಗ್ರಾಪಂನ ಅಂದಿನ ಪಿಡಿಒ, ಪ್ರಸಕ್ತ ಚೆನ್ನರಾಯಪಟ್ಟಣ ಜುಟ್ಟನಹಳ್ಳಿ ಗ್ರಾಪಂ ಪಿಡಿಒ ಆಗಿರುವ ಎಚ್‌.ಡಿ. ದೇವರಾಜ್‌, ಬಾರ್ಯ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜು, ಗುಮಾಸ್ತೆ ಪ್ರಮೀಳ, ತೆರಿಗೆ ವಸೂಲಿಗ ಸಂಜೀವ, ನಳ್ಳಿ ನೀರಿನ ಕರ ವಸೂಲಿಗ ಮಾಧವ ಮತ್ತು ಗ್ರಾಪಂ ಜವಾನ ಕುಶಾಲಪ್ಪ ಅವರಿಗೆ ನೋಟಿಸ್‌ ಜಾರಿ ಮಾಡಿ 4.55 ಲಕ್ಷ ರೂ. ಮರು ಪಾವತಿಸುವಂತೆ ಆದೇಶ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು