Monday, January 20, 2025
ಸುದ್ದಿ

ಉಡುಪಿಯಲ್ಲಿ ಲವ್​ ಜಿಹಾದ್​ : 18ರ ಹಿಂದೂ ಯುವತಿ ಬಲೆಬೀಸಿದ ಪುಂಡ ಜಿಹಾದಿ ; ಹಿಂದೂ ಮುಖಂಡ ಮಹೇಶ್ ಬೈಲೂರು ಆಕ್ರೋಶ – ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯಲ್ಲಿ ಲವ್​ ಜಿಹಾದ್​ ಪ್ರಕರಣ ನಡೆದಿದ್ಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈಗಷ್ಟೇ 18 ವರ್ಷ ತುಂಬಿದ ಯುವತಿಯನ್ನು ಪುಸಲಾಯಿಸಿ ಮುಸ್ಲಿಂ ಯುವಕ ಕರೆದೊಯ್ದಿದ್ದಾನೆ. ಇದು ಲವ್​ ಜಿಹಾದ್​ ಪ್ರಕರಣ ಎಂದು ಹಿಂದು ಸಂಟನೆಗಳು ಆರೋಪಿಸಿವೆ.

ಮಲ್ಪೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಹಿಂದು ಯುವತಿಯೊಬ್ಬಳು ಮನೆಯಿಂದ ನಾಪತ್ತೆಯಾಗಿದ್ದಾಳೆ. ಈ ಪ್ರಕರಣವೀಗ ಲವ್​ ಜಿಹಾದ್​ ತಿರುವು ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪದವಿ ಶಿಕ್ಷಣಕ್ಕಾಗಿ ಬ್ರಹ್ಮಾವರ ಪರಿಸರದ ಯುವತಿಯೊಬ್ಬಳು ಉಡುಪಿಗೆ ಪ್ರತಿನಿತ್ಯ ಕಾಲೇಜಿಗೆ ಬರುತ್ತಿದ್ದಾಗ ಸಂತೆಕಟ್ಟೆ ನಿವಾಸಿ ಬಸ್​ ಚಾಲಕನ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆಯಾಗಲು ನಿರ್ಧರಿಸಿದ್ದರೂ, ಯುವತಿಗೆ ವಯಸ್ಸು 18 ತುಂಬದಿರುವುದು ಅಡ್ಡಿಯಾಗಿತ್ತು. 18 ಭತಿರ್ಯಾಗುತ್ತಿದ್ದಂತೆ ಯುವತಿ ಮತ್ತು ಯುವಕ ಮನೆಯವರಿಗೆ ತಿಳಿಯದಂತೆ ಉಡುಪಿ ವಿವಾಹ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಕಚೇರಿಯ ನೋಟಿಸ್​ ಬೋರ್ಡ್​ನಲ್ಲಿ ಪುತ್ರಿಯ ಫೋಟೋ ಗಮನಿಸಿದ ಪಾಲಕರು ಆಕೆಗೆ ಬುದ್ಧಿಮಾತು ಹೇಳಿ ಯುವಕನಿಂದ ದೂರ ಮಾಡಲು ಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ, ಯುವತಿಯನ್ನು ಮನೆಯಲ್ಲಿ ಕೂಡಿ ಹಾಕಲಾಗಿದೆ ಎಂದು ಯುವಕ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಆಗ ಯುವತಿಯ ಮನೆಯವರನ್ನು ಕರೆಸಿದ ಪೊಲೀಸರು ಯುವತಿಯ ಅಭಿಪ್ರಾಯ ಕೇಳಿದಾಗ, “ನಾನು ಮನೆಯವರ ಜತೆ ಹೋಗುತ್ತೇನೆ’ ಎಂದಿದ್ದಳು. 40 ಸಾವಿರ ರೂ. ವಿಚಾರಕ್ಕೆ ಸಂಬಂಧಪಟ್ಟಂತೆ ಬಸ್​ ಡ್ರೈವರ್​ ಮೋಸ ಮಾಡಿದ್ದಾಗಿಯೂ ಠಾಣೆಯಲ್ಲಿ ಹೇಳಿಕೆ ನೀಡಿದ್ದಳು. ವಿವಾಹ ನೋಂದಣಿಗೆ ಸಾಕ್ಷಿ ಹಾಕಿದ್ದ ಮೂವರು ಸಾಕ್ಷಿದಾರರ ವಿರುದ್ಧ ಹೇಳಿಕೆ ನೀಡಿದ ಬಳಿಕ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿತ್ತು.

ಇದಾದ ನಂತರ ಸಂಬಂಧಿಕರ ಮನೆಯಲ್ಲಿದ್ದ ಯುವತಿ ಗುರುವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಈ ಬಗ್ಗೆ ಮಲ್ಪೆ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ನಾಪತ್ತೆಯಾದ ಯುವತಿಯನ್ನು ಹುಡುಕುತ್ತಿದ್ದೇವೆ, ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಮಲ್ಪೆ ಪೊಲೀಸರು ” ಕಹಳೆ ನ್ಯೂಸ್” ಗೆ ತಿಳಿಸಿದ್ದಾರೆ.

ಯುವಕನನ್ನು ಸಂಪಕಿರ್ಸಿದಾಗ “ನನಗೆ ಯುವತಿ ಬಗ್ಗೆ ಏನೂ ಗೊತ್ತಿಲ್ಲ, ನಾನು ಹಾಸನದಲ್ಲಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾನೆ. ಇದೊಂದು ವ್ಯವಸ್ಥಿತ ಲವ್​ ಜಿಹಾದ್​ ಪ್ರಕರಣವಾಗಿದ್ದು, ಆಕೆಯನ್ನು ಬೆದರಿಸಿ ಯುವಕ ಕರೆಸಿಕೊಂಡಿದ್ದಾನೆ. ಪೊಲೀಸರು ತನಿಖೆ ಚುರುಕುಗೊಳಿಸಬೇಕು ಎಂಬುದು ಹಿಂದು ಸಂಟನೆಗಳ ಆಗ್ರಹ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಹೇಶ್​ ಬೈಲೂರು ತಿಳಿಸಿದ್ದಾರೆ.