Recent Posts

Monday, January 20, 2025
ಸುದ್ದಿ

ಮುಳಿಯ ಜ್ಯುವೆಲ್ಸ್‌ನಿಂದ ಚಿನ್ನಾಭರಣಗಳ ವರ್ಚುವಲ್ ಶೋರೂಂ ಉದ್ಘಾಟನೆ :ವಿಡಿಯೋ ಕಾನ್ಫರೆನ್ಸ್ ಮೂಲಕ ಚಿನ್ನಾಭರಣ ಖರೀದಿ- ಕಹಳೆ ನ್ಯೂಸ್

ಪುತ್ತೂರು, ಜೂ.೧೦:ಪುತ್ತೂರಿನ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜುವೆಲ್ಸ್ ಗ್ರಾಹಕರಿಗಾಗಿ ಪರಿಚಯಿಸುತ್ತಿರುವ
ನೂತನ ಸೌಲಭ್ಯ ಮನೆಯಿಂದಲೇ ತಮ್ಮ ಮೊಬೈಲ್, ಟ್ಯಾಬ್ ಹಾಗೂ ಲ್ಯಾಪ್ ಟಾಪ್‌ನಿಂದ ಗೂಗಲ್ ಮೀಟ್/ ಝೋಮ್ / ವಾಟ್ಸ್ಆಪ್ / ವೀಡಿಯೋ
ಚಾಟ್ / ಸಕೈಪ್‌ನಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಭರಣ ಖರೀದಿಯ ವರ್ಚುವಲ್ ಶೋರೂಂ ಉದ್ಘಾಟನೆ ಜೂ.೧೦ರಂದು ನಡೆಯಿತು.


ಸುದಾನ ರೆಸಿಡೆನ್ಸಿಯಲ್ ಸಂಚಾಲಕ ವಿಜಯ ಹಾರ್ವಿನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಭರಣ
ಕ್ಷೇತ್ರದಲ್ಲಿ ಹಲವು ದಶಕಗಳ ಅನುಭವ ಹೊಂದಿರುವ ಮುಳಿಯ ಜುವೆಲ್ಸ್ ತನ್ನ ಗ್ರಾಹಕರ ಸ್ನೇಹಿ ಚಿಂತನೆಯೊ0ದಿಗೆ ಜನರ ವಿಶ್ವಾಸ ಗಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಕ್‌ಡೌನ್ ಸಂದರ್ಭದಲ್ಲಿ ಹೊಸ ಟೆಕ್ನಾಲಜಿ ಮೂಲಕ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಂಸ್ಥೆಯ ಚೇರ್ ಮ್ಯಾನ್ &amp: ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ವರ್ಚುವಲ್ ಶೋರೂಂ ಮೂಲಕ
ಲೈವ್ ಖರೀದಿಯ ಯೋಜನೆಗೆ ಗ್ರಾಹಕರು ಬೆಂಬಲ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು ಶೋರೂಂಗಳಲ್ಲಿರುವ ಆಭರಣಗಳನ್ನು ಮನೆಯಲ್ಲೇ ಕುಳಿತು ವೀಕ್ಷಿಸಿ ಅದರ
ವಿವರಗಳನ್ನು ಪಡೆದುಕೊಳ್ಳಬಹುದು, ಖರೀದಿಯೂ ಮಾಡಬಹುದು ಎಂದರು.

ಸ0ಸ್ಥೆಯ ಎಲ್ಲ ಶೋರೂಂಗಳಿAದ ಆಭರಣಗಳನ್ನು ಲೈವ್ ಮೂಲಕ ತೋರಿಸಿ ಆಭರಣಗಳ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಥಮ ಗ್ರಾಹಕರಾಗಿ ಬೆಂಗಳೂರಿನ ಅನುಪಮಾ ಶಿವರಾಂ ಚಿನ್ನಾಭರಣ ಖರೀದಿಸಿ, ಈ ವಿನೂತನ ಸೌಲಭ್ಯಕ್ಕೆ ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣನಾರಾಯಣ ಮುಳಿಯ ಸ್ವಾಗತಿಸಿದರು, ಮುಳಿಯ ಡಿಜಿಟಲ್ ಟೀಮ್ ಸದಸ್ಯರು ಉಪಸ್ಥಿತರಿದ್ದರು.
ಸೌಜನ್ಯ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದ ಉದ್ಘಾಟನೆ, ಖರೀದಿ, ವೀಕ್ಷಣೆ, ಎಲ್ಲವೂ ಆನ್‌ಲೈನ್ ಲೈವ್ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು

ಗ್ರಾಹಕರು ಆನ್‌ಲೈನ್ ಲೈವ್ ಮೂಲಕ ಪಾಲ್ಗೊಂಡು ಶುಭಹಾರೈಸಿದರು. ಖರೀದಿಯ ವ್ಯವಸ್ಥೆ ಗ್ರಾಹಕರು ತಮ್ಮ ತಮ್ಮ Mobile/ Tab/ Google meet/ Zoom/ Whatsapp/ Video chat ಮೂಲಕ online ನಲ್ಲಿ ಕಣ್ಣೆದುರು Laptop/Mobile ನೋಡಿ ಆಭರಣಗಳ
ಶ್ರೇಣಿಯನ್ನು ಆನಂದಿಸಬಹುದು, ಮಾತುಕತೆ ನಡೆಸಿ ನಮ್ಮ ಸೇಲ್ಸ್ ಸಿಬ್ಬಂದಿಗಳ ಜೊತೆ ಆಭರಣಗಳ ಕುರಿತು ಸಂಪೂರ್ಣ ವಿವರ,ಪ್ರಾತ್ಯಕ್ಷಿಕೆ ಪಡೆಯಬಹುದು.

ಹಾಗೆಯೇonlineಪಾವತಿ ಮಾಡಿ ಆಭರಣವನ್ನು ಮನೆಯಲ್ಲಿಯೇ ಕೂತು ಪಡೆಯಬಹುದು. ನಮ್ಮ ಶೋರೂಂ ಪ್ರದೇಶದಲ್ಲಿ ಡೋರ್ ಡೆಲಿವರಿ, ದೂರದ ಪ್ರದೇಶಗಳಿಗೆ ಇನ್ಸುರೆನ್ಸ್ ಕೊರಿಯರ್ ಮೂಲಕ ತಲುಪಿಸಲಾಗುವುದು.

ಈ ಸೌಲಭ್ಯದಲ್ಲಿ ಗ್ರಾಹಕರು ಮುಳಿಯ ಸಂಸ್ಥೆಯ ಎಲ್ಲಾ ಐದು ಮಳಿಗೆಗಳ ಆಭರಣಗಳನ್ನು ವೀಕ್ಷಿಸಿ ಆಯ್ಕಗೆ ಅವಕಾಶವಿರುತ್ತದೆ. ೬೫ ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಪುಟಾಣಿಗಳನ್ನ ಮನೆಯಿಂದಲೇ ಚಿನ್ನಾಭರಣ ಖರೀದಿಯಲ್ಲಿ ತೊಡಗಿಸುವುದರಲ್ಲಿ ಈ ವ್ಯವಸ್ಥೆ ಸಹಕಾರಿಯಾಗಲಿದೆ.