ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ವಿಡಿಯೋ ಹರಿಬಿಟ್ಟ ಜಿಹಾದಿಗಳು ; ಮಸೂದ್, ಅಜೀಮ್ , ಲತೀಫ್, ಆರ್ಫಾಜ್ ಹೆಡೆಮುರಿಕಟ್ಟಿದ ಬಂಟ್ವಾಳ ಪೋಲೀಸರು – ಕಹಳೆ ನ್ಯೂಸ್
ಬಂಟ್ವಾಳ, ಜೂ 14 : ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿ ಇರುವ ಹಿಂದೂಗಳ ಧಾರ್ಮಿಕ ಸ್ಥಳದಲ್ಲಿ ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸಜೀಪನಡು ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಮಸೂದ್ (20), ಮೊಹಮ್ಮದ್ ಅಜೀಮ್ (20), ಅಬ್ದುಲ್ ಲತೀಫ್ (20), ಮೊಹಮ್ಮದ್ ಅರ್ಫಾಜ್ (20) ಎನ್ನಲಾಗಿದೆ.
ಜೂನ್ 13ರಂದು ಸಜೀಪನಡು ಗ್ರಾಮದ ಕಂಚಿನಡ್ಕ ಪದವು ಎಂಬಲ್ಲಿನ ಧಾರ್ಮಿಕ ಸ್ಥಳದಲ್ಲಿ ಧಾರ್ಮಿಕ ನಂಬಿಕೆಗೆ ಘಾಸಿಯಾಗುವಂತ ಕೃತ್ಯವೆಸಗಿದ್ದು, ಬಳಿಕ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.