ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಬಜರಂಗದಳ, ಜಾಗರಣಾ ವೇದಿಕೆ ಕಾರ್ಯಕರ್ತರ ಮೇಲಿನ ಎಲ್ಲಾ ಕೇಸು ವಾಪಸ್! – ಬಿಎಸ್‌ವೈ

ಮಂಗಳೂರು : ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ರಾಜ್ಯಾದ್ಯಂತ ತಮ್ಮದೇ ಶೈಲಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದು ಕರಾವಳಿ ಜಿಲ್ಲೆಗಳಲ್ಲಿ ಹಮ್ಮಿಕೊಂಡಿದ್ದ ಜನ ಸುರಕ್ಷಾ ಯಾತ್ರೆಯ ನಿಮಿತ್ತ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ‘ನಾನು 24 ಗಂಟೆಯೊಳಗೆ ಬಜರಂಗದಳ, ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಮೇಲೆ ಹಾಕಿರುವ ಎಲ್ಲ ಕೇಸು ಹಿಂತೆಗೆಯುತ್ತೇನೆ’ ಎಂದು ಘೋಷಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಕೇವಲ 60 ದಿನ ಅಧಿಕಾರ ನಡೆಸಲಿದೆ. ಸಿದ್ದರಾಮಯ್ಯ ಅವರ ದುರಾಡಳಿತ ಕೊನೆಗೊಳಿಸಿ, ಅವರ ಅಕ್ರಮಗಳನ್ನು ಬಯಲುಗೊಳಿಸಲು ನನಗೆ ಆಶೀರ್ವಾದ ಕೊಡಿ. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಹಿಂದುಗಳ ಮೇಲೆ ಹಾಕಿರುವ ಎಲ್ಲ ಕೇಸು ಹಿಂತೆಗೆಯುತ್ತೇನೆ ಎಂದು ಈ ಮೂಲಕ ನಾನು ಘೋಷಣೆ ಮಾಡುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಯೋಗಿ ಆದಿತ್ಯನಾಥ್ ನಿರ್ವಹಣೆ ಮಾಡುತ್ತಿರುವ ಮಾದರಿಯಲ್ಲಿ ನಾನು ಕೂಡ ಕರ್ನಾಟಕದಲ್ಧಿ ಎಲ್ಲ ಗೂಂಡಾಗಳ ಹುಟ್ಟಡಗಿಸುತ್ತೇನೆ. ಸ್ವಚ್ಛ, ದಕ್ಷ, ಆಡಳಿತ ನೀಡಿ ರಾಜ್ಯವನ್ನು ಮಾದರಿಯನ್ನಾಗಿಸುತ್ತೇನೆ ಎಂದು ಭರವಸೆ ನೀಡಿದರು.
ವರದಿ : ಕಹಳೆ ನ್ಯೂಸ್