Tuesday, January 21, 2025
ಸುದ್ದಿ

ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಜಾನುವಾರುಗಳ ಸಾಗಾಟ ; ಉಮ್ಮರ್ ಹಾಗೂ ಸಹಚರ ಅಂದರ್ – ಸೂಪರ್ ಕಾಪ್ ಸಂಪ್ಯ ಎಸ್.ಐ.ಉದಯರವಿಯವರಿಂದ ಗೋವುಗಳ ರಕ್ಷಣೆ – ಕಹಳೆ ನ್ಯೂಸ್

ಪುತ್ತೂರು: ಮೂರು ದಿನಗಳ ಹಿಂದೆಯಷ್ಟೇ ಕೇರಳಕ್ಕೆ ಅಕ್ರಮ ಗೋ ಸಾಗಾಟ ಪ್ರಕರಣವನ್ನು ಭೇದಿಸಿದ್ದ ಸಂಪ್ಯ ಎಸ್.ಐ ಉದಯ ರವಿ ಅವರು ಇದೀಗ ಮತ್ತೊಮ್ಮೆ ಅದೇ ಪರಿಸರದಲ್ಲಿ ಕೇರಳಕ್ಕೆ ಪಿಕಪ್ ಜೀಪಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿ, ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.

ಜೂ.14ರಂದು ಪಾಣಾಜೆ ರೌಂಡ್ಸ್‌ನಲ್ಲಿರುವ ವೇಳೆ ಅಕ್ರಮ ಗೋ ಸಾಗಾಟ ಪ್ರಕರಣ ಪತ್ತೆ ಮಾಡಿದ್ದಾರೆ. ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿ ಮಹಮ್ಮದ್ ಅವರ ಪುತ್ರ ಉಮ್ಮರ್ ಎ (38ವ), ಕಾಸರಗೋಡು ಮಂಜೇಶ್ವರ ಗ್ರಾಮದ ಬೈತಡ್ಕ ನಿವಾಸಿ ಜಗನ್ನಾಥ ಪೂಜಾರಿ(60ವ)ರವರು ಬಂಧಿತ ಆರೋಪಿಗಳು.ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿವೈಎಸ್ಪಿ ದಿನಕರ್ ಶೆಟ್ಟಿ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ನಾಗೇಶ್ ಕದ್ರಿಯವರ ನಿರ್ದೇಶನದಂತೆ ಎಸ್.ಐ. ಉದಯರವಿ ಅವರ ನೇತೃತ್ವದಲ್ಲಿ ಪಾಣಾಜೆ ಗ್ರಾಮದ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಣಾಜೆ ಗ್ರಾಮದ ಆರ್ಲಪದವು-ಸ್ವರ್ಗ ರಸ್ತೆಯ ಚಂದ್ರಗಿರಿ ಎಂಬಲ್ಲಿ ಆರ್ಲಪದವು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನವನ್ನು ತಪಾಸಣೆ ನಡೆಸಿದರು.ಈ ವೇಳೆ ೨ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ.ಈ ಕುರಿತು ಆರೋಪಿಗಳಾದ ಉಮ್ಮರ್ ಮತ್ತು ಜಗನ್ನಾಥ ಅವರಲ್ಲಿ ವಿಚಾರಿಸಿದಾಗ ಮಾಂಸ ಮಾಡುವ ಉದ್ದೇಶದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿರುವ ಕುರಿತು ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಗೋವುಗಳನ್ನು ರಕ್ಷಣೆ ಮಾಡಿ ರೂ.೨ ಲಕ್ಷ ಮೌಲ್ಯದ ಪಿಕಪ್ ಜೀಪು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಮತ್ತು ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಕೇರಳ ಕಡೆ ಸಾಗಾಟ ಮಾಡುವುದು ಧೃಡಪಟ್ಟಿದ್ದು ಆರೋಪಿಗಳ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು