Tuesday, January 21, 2025
ಸುದ್ದಿ

Breaking News : ಶಾಲೆ ಆರಂಭಕ್ಕೂ ಮುನ್ನವೇ ರಾಜ್ಯದ ಜನತೆಗೆ ಆಘಾತಕಾರಿ ಸುದ್ದಿ ; 8 ಮಂದಿ ಶಾಲಾ ಶಿಕ್ಷಕರಿಗೆ ಸೋಂಕು ಪತ್ತೆ – ಕಹಳೆ ನ್ಯೂಸ್

ಧಾರವಾಡ : ಶಾಲೆ ಆರಂಭ ಮುನ್ನವೇ ಆಘಾತಕಾರಿ ಸುದ್ದಿಯೊಂದು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. 8 ಮಂದಿ ಶಾಲಾ ಶಿಕ್ಷಕರಲ್ಲಿ ಮಹಾಮಾರಿ ಕೊರೊನಾ ಸೋಂಕು ಪತ್ತೆಯಾಗಿದೆ.

ಧಾರವಾಡದ ಪ್ರತಿಷ್ಠಿತ ಶಾಲೆಯ ಶಿಕ್ಷಕರು ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಭಾನುವಾರ ಬಂದ 10 ಜನರಲ್ಲಿ 7 ಮಂದಿ ಶಿಕ್ಷಕರಿಗೆ ಸೋಂಕು ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ಶಿಕ್ಷಕಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಅವರ ಪತಿಯಲ್ಲೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದೀಗ ಈ ಶಿಕ್ಷಕಿಯು ಸಂಪರ್ಕಕ್ಕೆ ಬಂದಿದ್ದ ಇನ್ನುಳಿದ ಏಳು ಜನ ಶಿಕ್ಷಕರಲ್ಲೂ ಭಾನುವಾರದಂದು ಸೋಂಕು ದೃಢಪಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಂಕು ಬಂದ ಶಿಕ್ಷಕಿ ಶಾಲೆಯ ಪೂರ್ವಭಾವಿ ಸಭೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸೋಂಕು ಬಂದಿದೆ. ಜೂನ್ 8ರಂದು ಪೂರ್ವಭಾವಿ ಸಭೆ ನಡೆದಿತ್ತು. ಸಭೆಯಲ್ಲಿ ಸೋಂಕಿತ ಶಿಕ್ಷಕಿ ಜೊತೆ ಸಂಪರ್ಕಕ್ಕೆ ಬಂದ 7 ಮಂದಿ ಶಿಕ್ಷಕರಿಗೆ ಸೋಂಕು ದೃಢವಾಗಿದೆ. ಶಾಲೆ ಆರಂಭಕ್ಕೂ ಮುನ್ನವೇ ಶಿಕ್ಷಕರಲ್ಲಿ ಕೊರೊನಾ ದೃಢಪಟ್ಟಿರುವುದು ಪೋಷಕರಲ್ಲಿ ಆಂತಕ ಮನೆ ಮಾಡಿದೆ. 24 ಮಂದಿ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಈಗ 24 ಜಿಲ್ಲಾಡಳಿತ ಎಲ್ಲರನ್ನು ಕ್ವಾರಂಟೈನ್ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಂಕು ಬಂದಿದ್ದು ಹೇಗೆ?
ತೀವ್ರ ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಧಾರವಾಡ ನಗರದ ಯಾಲಕ್ಕಿ ಶೆಟ್ಟರ್ ಕಾಲನಿಯ ನಿವಾಸಿಯಾದ 31 ವರ್ಷ ಶಿಕ್ಷಕಿಯನ್ನು (ರೋಗಿ-5970) ತಪಾಸಣೆಗೆ ಒಳಪಡಿಸಿದಾಗ ಜೂನ್ 11 ರಂದು ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ರೋಗಿ-5970 ಸಂಪರ್ಕದಿಂದ ಅದೇ ಕಾಲನಿಯ ನಿವಾಸಿಯಾದ 34 ವರ್ಷದ ಅವರ ಪತಿಗೂ (ರೋ-6260) ಸೋಂಕು ತಗುಲಿದ್ದು, ಅದು ಜೂ.12ಕ್ಕೆ ದೃಢಪಟ್ಟಿತ್ತು. ಇದೀಗ ರೋಗಿ-5970 ಸಂಪರ್ಕದಿಂದಲೇ ಬರೋಬ್ಬರಿ ಏಳು ಜನ ಶಿಕ್ಷಕರಿಗೆ ಸೋಂಕು ಬಂದಿದೆ.

ಸೋಂಕಿತ ರೋಗಿ-5970 ಮಹಿಳೆಯು ಖಾಸಗಿಯ ಅನುದಾನರಹಿತ ಹೈಸ್ಕೂಲ್‍ನ ಶಿಕ್ಷಕಿಯಾಗಿದ್ದರು. ಈ ನಡುವೆ ಶಿಕ್ಷಕಿಯು ಜೂನ್ 8ರಂದು ಹೈಸ್ಕೂಲ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಅವರ ಸಂಪರ್ಕಕ್ಕೆ ಬಂದ ಹೈಸ್ಕೂಲ್‍ನ 20ಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದು, ಈ ಪೈಕಿ ಭಾನುವಾರ ಏಳು ಜನ ಶಿಕ್ಷಕರಿಗೆ ಸೋಂಕು ಇರುವುದು ಖಚಿತವಾಗಿದೆ.

ಸೋಂಕಿತರ ವಿವರ:
54 ವರ್ಷದ ಪುರುಷ (ರೋಗಿ-6833), 30 ವರ್ಷದ ಮಹಿಳೆ (ರೋಗಿ-6834), 46 ವರ್ಷದ ಮಹಿಳೆ (ರೋಗಿ-6835), 49 ವರ್ಷದ ಮಹಿಳೆ (ರೋಗಿ-6836), 26 ವರ್ಷದ ಮಹಿಳೆ (ರೋಗಿ-6837), 39 ವರ್ಷದ ಮಹಿಳೆ (ರೋಗಿ-6841) ಮತ್ತು 35 ವರ್ಷದ ಮಹಿಳೆ (ರೋಗಿ-6842) ಇವರೆಲ್ಲರಲ್ಲಿ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ಸೋಂಕಿತ 59 ವರ್ಷದ ಪುರುಷ (ರೋಗಿ-6222) ಸಂಪರ್ಕದಿಂದ 8 ವರ್ಷದ ಬಾಲಕನಿಗೂ (ರೋಗಿ-6838) ಸೋಂಕು ಬಂದಿದೆ. ಇನ್ನುಳಿದಂತೆ ತೀವ್ರ ಉಸಿರಾಟ ಸಮಸ್ಯೆಯಿಂದ 20 ವರ್ಷದ ರೋಗಿ-6839 ಹಾಗೂ ರೋಗಿ-6840 ಯುವಕರಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.