Monday, January 20, 2025
ರಾಜಕೀಯಸುದ್ದಿ

“‘ಮಾಸ್ಕ್ ಡೇ’ ಆಚರಣೆ, ಸಾಮಾಜಿಕ ಅಂತರ ಕಡ್ಡಾಯ, ನಿಯಮ ಉಲ್ಲಂಘಿಸಿದರೆ 200ರೂ. ದಂಡ”:-ಬಿ.ಎಸ್‌.ಯಡಿಯೂರಪ್ಪ-ಕಹಳೆ ನ್ಯೂಸ್

ಬೆಂಗಳೂರು, ಜೂ.15- ಕೊರೊನಾ ಸೋಂಕು ನಿಯಂತ್ರಣಕ್ಕೆ ಇನ್ನು ಮುಂದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಲಾಗುವುದು. ನಿಯಮ ಉಲ್ಲಂಘಿಸಿದವರಿಗೆ 200 ರೂ. ದಂಡ ವಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕಾಗಿ ಮಾಸ್ಕ್ ಡೇ ಎಂಬ ವಿನೂತನ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಾಸ್ಕ್ ಕಡ್ಡಾಯ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿದೆ. ಕೊರೊನಾ ಸೋಂಕು ತಡೆಯುವಲ್ಲಿ ಇದು ಅತ್ಯಗತ್ಯವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಬಳಿ ಸಿನಿಮಾ ನಟರು ಹಾಗೂ ಕ್ರೀಡಾಪಟುಗಳನ್ನು ಸೇರಿಸಿಕೊಂಡು ಮಾಸ್ಕ್ ಡೇ ಎಂಬ ವಿನೂತನ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತೇವೆ. ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯ ಮಾಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಸ್ಕ್ ಹಾಕಿಕೊಳ್ಳದ ವ್ಯಕ್ತಿಗಳಿಗೆ ದಂಡ ವಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಕೊರೊನಾ ಸೋಂಕಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈವರೆಗೆ 7000 ಸೋಂಕಿತ ಪ್ರಕರಣಗಳಿವೆ. ಅದರಲ್ಲಿ 3,955 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿ ಸೋಂಕಿನ ಪ್ರಮಾಣ ಶೇ.2.8ರಷ್ಟಿದ್ದರೆ, ರಾಜ್ಯದಲ್ಲಿ 1.2ರಷ್ಟು ಮಾತ್ರ ಇವೆ. ಗುಣಮುಖರಾದವರ ಪ್ರಮಾಣ ರಾಷ್ಟ್ರ ಮಟ್ಟದಲ್ಲಿ 51.1ರಷ್ಟಿದ್ದರೆ ನಮ್ಮ ರಾಜ್ಯದಲ್ಲಿ 56.5ರಷ್ಟಿದೆ ಎಂದು ಯಡಿಯೂರಪ್ಪನವರು ವಿವರಗಳನ್ನು ನೀಡಿದರು.

ಪ್ರಸ್ತುತ 71 ಕೋವಿಡ್-19 ಪ್ರಯೋಗಾಲಯಗಳಿವೆ. 41 ಸರ್ಕಾರಿ ಲ್ಯಾಬ್‍ಗಳಿದ್ದು, 31 ಖಾಸಗಿ ಲ್ಯಾಬ್‍ಗಳಿವೆ. 4,40,684 ಟೆಸ್ಟ್‍ಗಳನ್ನು ಈವರೆಗೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 7,000 ಸೋಂಕಿತ ಪ್ರಕರಣಗಳ ಪೈಕಿ 2,956 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಬೆಂಗಳೂರಿನಲ್ಲಿ 697 ಸೋಂಕಿತ ಪ್ರಕರಣಗಳಿದ್ದು , 89 ಮಂದಿ ಮೃತಪಟ್ಟಿದ್ದು ,ಇದರಲ್ಲಿ 86 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು , 3 ಮಂದಿ ಅನ್ಯ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 36 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು. ನಮ್ಮ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಲಾಕ್‍ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ನಮ್ಮ ರಾಜ್ಯದವರಿಂದ ಹೆಚ್ಚು ಸೋಂಕು ವ್ಯಾಪಿಸಿಲ್ಲ. ನಮ್ಮ ವೈದ್ಯರು , ನರ್ಸ್‍ಗಳು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಆದರೆ ಸೋಂಕಿತ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಯಿಂದ ಬಂದವರಿಂದ ಸೋಂಕು ಹೆಚ್ಚಾಗಿ ಹರಡಿದೆ ಎಂದು ಹೇಳಿದರು.

ಇನ್ನು ಮುಂದೆ ಮಹಾರಾಷ್ಟ್ರದಿಂದ ಹಿಂದಿರುಗಿದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್, 7 ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು. ಚೆನ್ನೈನಿಂದ ಬಂದವರಿಗೆ ಮೂರು ದಿನ ಕ್ವಾರಂಟೈನ್ ಹಾಗೂ 11 ದಿನ ಹೋಂ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.

ರೋಗ ಲಕ್ಷಣಗಳಿಲ್ಲದೆ ಶೇ.93ರಷ್ಟು ಸೋಂಕು ಹರಡುತ್ತಿದೆ. ರೋಗ ಲಕ್ಷಣ ಕಂಡು ಬರುವುದು ಶೇ.7ರಷ್ಟಿದೆ. ಕೊರೊನಾ ತಡೆಯುವಲ್ಲಿ ನಾವು ಸಂಪೂರ್ಣವಾಗಿ ಯಶಸ್ವಿಯಾಗಿದ್ದೇವೆ. ಲಾಕ್‍ಡೌನ್ ಅನ್ನು ಮತ್ತೆ ರಾಜ್ಯದಲ್ಲಿ ಹೇರುವುದಿಲ್ಲ.

ಲಾಕ್‍ಡೌನ್ ನಿಯಮಗಳಲ್ಲಿ ಇನ್ನಷ್ಟು ವಿನಾಯಿತಿ ಆಗಬೇಕು. ನಾಳೆ ಪ್ರಧಾನಿಗಳ ವಿಡಿಯೋ ಕಾನರೆನ್ಸ್‍ನಲ್ಲಿ ಈ ಬಗ್ಗೆ ಮನವಿ ಮಾಡುತ್ತೇನೆ ಎಂದು ಅವರು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.