Monday, January 20, 2025
ಸುದ್ದಿ

ಪುಂಡರಿಂದ ನಡೆಯುತ್ತಿದೆ ಹಿಂದೂ ಧರ್ಮದ ಅವಹೇಳನ : ಪಾಪಿಗಳಿಗೆ ಕಠಿಣ ಶಿಕ್ಷೆಯಾಗದಿದ್ದರೆ ಪ್ರತಿಭಟನೆ ಹಿಂದೂ ಜಾಗರಣ ವೇದಿಕೆ ಖಡಕ್ ಎಚ್ಚರಿಕೆ – ಕಹಳೆ ನ್ಯೂಸ್

ಹಿಂದೂ ದೇವರುಗಳ ಮೇಲೆ, ಮರ‍್ತಿಗಳ ಮೇಲೆ, ಪವಿತ್ರ ಸ್ಥಳಗಳ ಮೇಲೆ ಧಮಾರ್ಂಧರ ದಾಂಧಲೆ, ಅನಾಚಾರ ಮಿತಿಮೀರುತ್ತಿದೆ .ಇಂದು ಸಜಿಪದ ಹಿಂದೂ ರುದ್ರಭೂಮಿಯ ಬಳಿ ಶಿವನ ಮರ‍್ತಿಯಿರುವ ಪೀಠದ ಮೇಲೆ ಮತಾಂಧರು ಚಪ್ಪಲಿ ಶೂ ಧರಿಸಿ ಟಿಕ್‍ಟಾಕ್ ವೀಡಿಯೋಗಳನ್ನು ಮಾಡಿ ಹಿಂದೂಗಳ ಧರ‍್ಮಿಕ ಭಾವನೆಗೆ ಧಕ್ಕೆ ತಂದಿರುತ್ತಾರೆ. ಅದೇ ರೀತಿ ಸ್ಥಳದಲ್ಲಿಯೇ ಸಿಕ್ಕಿರುವ ಬೀಡಿ,ಸಿಗರೆಟ್, ಬಿಯರ್ ಬಾಟಲಿಗಳು ಇವರ ವಿಕೃತಿ ಹಾಗೂ ಅಹಂಕಾರವನ್ನು ಬಿಂಬಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕಿನ ಅಧ್ಯಕ್ಷರಾದ ಗಣೇಶ್ ಕುಲಾಲ್ ಕೆದಿಲ ಹೇಳಿದ್ದಾರೆ.


ಪದೇ ಪದೇ ಹಿಂದೂ ರ‍್ಮದ ನಂಬಿಕೆಗಳ ಮೇಲೆ ಇಂತಹ ನೀಚರು ತಮ್ಮ ಕುಕೃತ್ಯಗಳ ಮೂಲಕ ಶ್ರದ್ದಾಕೇಂದ್ರಗಳನ್ನು ಅಪವಿತ್ರಗೊಳುಸುತ್ತಿದ್ದಾರೆ. ಇದನ್ನು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಬಲವಾಗಿ ಖಂಡಿಸುತ್ತದೆ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿದ ಪೊೀಲೀಸ್ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಯಾವುದೇ ಒತ್ತಡಗಳಿಗೆ ಇಲಾಖೆ ಒಳಗಾಗಬಾರದು. ಒಂದು ವೇಳೆ ಶಿಕ್ಷೆ ಆಗದೇ ಇದ್ದಲ್ಲಿ ಮುಂದಕ್ಕೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು