Monday, January 20, 2025
ಸುದ್ದಿ

ಫಾಸ್ಟ್ ಫುಡ್ ಕ್ಯಾಂಟೀನ್ ಮಾಲಕಿಯ ಅಪ್ರಾಪ್ತ ಮಗಳನ್ನೇ ಗರ್ಭಿಣಿಯಾಗಿಸಿದ ಲಂಪಟ ; ಅನ್ನಕೊಟ್ಟ ಮನೆಗೆ ಕನ್ನ ಹಾಕಿದ ಯುವಕ ಪೋಲೀಸರ ಅತಿಥಿ – ಕಹಳೆ ನ್ಯೂಸ್

ಉಳ್ಳಾಲ, ಜೂ.16: ತಾನು ಕೆಲಸ ಮಾಡುತಿದ್ದ ಫಾಸ್ಟ್ ಫುಡ್ ಕ್ಯಾಂಟೀನ್ ಮಾಲಕಿಯ ಮಗಳನ್ನೇ ಗರ್ಭಿಣಿಯಾಗಿಸಿದ,ಆರೋಪದಲ್ಲಿ ಯುವಕನೊಬ್ಬನನ್ನು ಉಳ್ಳಾಲ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ . ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಪ್ರಕರಣ ಇದಾಗಿರುವುದರಿಂದ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಳಚ್ಚಿಲ್ ನಿವಾಸಿ ಲವಕುಮಾರ್ ಅಲಿಯಾಸ್ ಶ್ರವಣ್ ಬಂಧಿತ ಆರೋಪಿ.

ಆರೋಪಿ ತೊಕ್ಕೊಟ್ಟಿನ ಫಾಸ್ಟ್ ಫುಡ್ ಕ್ಯಾಂಟೀನ್ ವೊಂದರಲ್ಲಿ ದುಡಿಯುತ್ತಿದ್ದು, ಕ್ಯಾಂಟೀನ್ ಮಾಲಕಿಯ ಪುತ್ರಿಯನ್ನು ಅತ್ಯಾಚಾರಗೈದಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಸಂತ್ರಸ್ತೆ 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಈ ಕುರಿತಂತೆ ಬಾಲಕಿಯ ತಾಯಿ ಪೊಲೀಸ್ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು