Recent Posts

Monday, January 20, 2025
ಸುದ್ದಿ

ಚೀನಾ ನರಿಬುದ್ಧಿಗೆ ಭಾರತ ದಿಟ್ಟ ಉತ್ತರ 5 ಚೀನಾ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ, 11 ಮಂದಿ ಸೈನಿಕರಿಗೆ ಗಾಯ!- ಕಹಳೆ ನ್ಯೂಸ್

ಲಡಾಖ್: ಗಡಿ ಭಾಗದಲ್ಲಿ ಭಾರತದ ಸೇನೆ ವಿರುದ್ಧ ನಿನ್ನೆ ರಾತ್ರಿ ಚೀನಾ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಭಾರತೀಯ ಸೇನಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಸೇನೆಯ ಮೇಲೆ ಭಾರತೀಯ ಯೋಧರು ಪ್ರತಿದಾಳಿ ನಡೆಸಿದ್ದು ಐವರು ಚೀನಾ ಸೈನಿಕರು ಸಾವಿಗೀಡಾಗಿ 11 ಮಂದಿ ಸೈನಿಕರು ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಗಾಲ್ವನ್ ಕಣಿವೆ ಭಾಗದಲ್ಲಿ ನಿನ್ನೆ ರಾತ್ರಿಯಿಂದ ಗುಂಡಿನ ದಾಳಿ ನಡೆಯುತ್ತಿದ್ದು ಉದ್ವಿಗ್ನ ಸ್ಥಿತಿ ನೆಲೆಸಿದೆ.
ಲಡಾಖ್ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಎಲ್‍ಎಸಿ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ದಾರೆ. ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಚೀನೀಯರ ಕೆಂಗಣ್ಣಿಗೆ ಕಾರಣವಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು