Sunday, November 24, 2024
ಸುದ್ದಿ

ಬೆಳ್ತಂಗಡಿ ತಾಲೂಕಿನ ನೆಕ್ಕರೆ ಪಲ್ಕೆಯ ಸಂಕಷ್ಟದಲ್ಲಿರುವ ಮಲೆಕುಡಿಯ ಕುಟುಂಬಗಳಿಗೆ ತಲಾ ಒಂದು ಎಕ್ರೆ ಜಮೀನು ನೀಡಲು ಶಾಸಕ ಹರೀಶ್ ಪೂಂಜ ಸೂಚನೆ – ಕಹಳೆ ನ್ಯೂಸ್

ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ಸರ್ಕಾರಿ ಜಾಗದಲ್ಲಿ ಸುಮಾರು ಹತ್ತು ವರ್ಷಗಳಿಂದ ವಾಸವಾಗಿದ್ದು. ಜೀವನೋಪಾಯಕ್ಕಾಗಿ ಸರ್ಕಾರಿ ಜಾಗದಲ್ಲಿ ಕೃಷಿ ಮಾಡಿದ್ದರು. ಕಂದಾಯ ಇಲಾಖೆ ಮಲೆಕುಡಿಯರ ಸ್ವಾಧೀನದಲ್ಲಿ ಇದ್ದ ಜಮೀನಿಗೆ ಬೇಲಿ ಹಾಕಿ ಕಂದಾಯ ಇಲಾಖೆ ಎಂಬ ಬೋರ್ಡ್ ಹಾಕಿತ್ತು. ಸಂತ್ರಸ್ತರು ಭೂ ರಹಿತರಾಗಿದ್ದು ಹತ್ತು ವರ್ಷಗಳ ಹಿಂದೆ ಯಾವುದೇ ಪ್ಯಾಕೇಜ್ ಪಡೆಯದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಿಂದ ಹೊರಬಂದು ಸುಲ್ಕೇರಿಯ ನೆಕ್ಕರೆ ಪಲ್ಕೆಯಲ್ಲಿ ವಾಸವಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ್ರಸ್ತರು ಮತ್ತು ಮಲೆಕುಡಿಯ ಸಂಘದ ಪದಾಧಿಕಾರಿಗಳು ಮಂಗಳವಾರ ಶಾಸಕರನ್ನು ಬೆಳ್ತಂಗಡಿಯ ಪ್ರವಾಸಿ ಬಂಗಲೆಯಲ್ಲಿ ಭೇಟಿಯಾಗಿ ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ಬೇಡಿಕೆಗೆ ಸ್ಪಂದಿಸಿದ ಶಾಸಕರು ತಹಸೀಲ್ದಾರ್ ರವರಲ್ಲಿ ದೂರವಾಣಿ ಮೂಲಕ ಮಾತನಾಡಿ ಪ್ರತಿ ಕುಟುಂಬಕ್ಕೆ ತಲಾ ಒಂದು ಎಕ್ರೆ ಜಮೀನು ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಉಜಿರೆ , ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಯ ಅಧ್ಯಕ್ಷರಾದ ನೋಣಯ್ಯ ಮಚ್ಚಿನ , ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಮತ್ತು ಬಿ.ಜೆ.ಪಿ ಎಸ್ಟಿ ಮೋರ್ಚಾದ ತಾಲೂಕು ಅಧ್ಯಕ್ಷರಾದ ಹರೀಶ್ ಎಳನೀರ್ , ಜಯಾನಂದ ಸವಣಾಲು ಮೊದಲಾದವರು .

ಜಾಹೀರಾತು
ಜಾಹೀರಾತು
ಜಾಹೀರಾತು

ನೆಕ್ಕರೆ ಪಲ್ಕೆಯ ಸಂತ್ರಸ್ತರಿಗೆ ತಲಾ ಒಂದು ಎಕ್ರೆ ಜಮೀನು ನೀಡಲು ಕ್ರಮಕೈಗೊಳ್ಳಲಾಗುವುದು ಪ.ಪಂಡದ ಪುನರ್ವಸತಿಗೆ ಮೀಸಲಿಟ್ಟ 190 ಎಕ್ರೆ ಜಮೀನಿಗೆ ಗಡಿಗುರುತು ಮಾಡಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ

– ಶಾಸಕ ಹರೀಶ್ ಪೂಂಜ

ರಾಷ್ಟ್ರೀಯ ಉದ್ಯಾನವನ, ಬಫರ್ ಝೋನ್ ಮೊದಲಾದ ಕಾರಣಗಳಿಂದ ಬುಡಕಟ್ಟು ಸಮುದಾಯಕ್ಕೆ ನೆಲೆಯಿಲ್ಲದಂತಾಗಿದೆ. ಸರ್ಕಾರದ ನೀತಿಗಳು ಈ ನಿಟ್ಟಿನಲ್ಲಿ ಬದಲಾಗಬೇಕು. ನಮ್ಮ ನೋವಿಗೆ ಧ್ವನಿಯಾದ ಶಾಸಕರಿಗೆ ಮನದಾಳದ ಕೃತಜ್ಞತೆಗಳು

– ಹರೀಶ್ ಎಳನೀರ್
ಅಧ್ಯಕ್ಷರು ಬಿಜೆಪಿ ಎಸ್ಟಿ ಮೋರ್ಚಾ,
ಕಾರ್ಯದರ್ಶಿ ಮಲೆಕುಡಿಯ ಸಂಘ ತಾಲೂಕು ಸಮಿತಿ ಬೆಳ್ತಂಗಡಿ