Recent Posts

Sunday, January 19, 2025
ಸಿನಿಮಾಸುದ್ದಿ

ಮಳೆಯಲ್ಲಿ ಸದ್ದು ಮಾಡುತ್ತಿದೆ ವಸಿಷ್ಠ ಸಿಂಹ, ಬಡೆಕಿಲ ಪ್ರದೀಪ್ ಸೇರಿದಂತೆ ೧೫ ಪ್ರತಿಭಾನ್ವಿತ, ಹೆಸರಾಂತ ಗಾಯಕರು ಧ್ವನಿಗೂಡಿಸಿದ ” ಓ ಮಳೆ ಹನಿಯೇ..! ” ವಿಡಿಯೋ ಸಾಂಗ್ – ಕಹಳೆ ನ್ಯೂಸ್

ಮಳೆಗಾಲದ ಈ ಸಮಯದಲ್ಲಿ ಸಂಗೀತ ಪ್ರಿಯರ ಮನ ತಣಿಸಲು ಮಳೆಯ ಕುರಿತಾದ ಒಂದು ವಿನೂತನ ಕನ್ನಡ ಹಾಡು ” ಓ ಮಳೆ ಹನಿಯೇ..! ” ಮೇ ೧೪ (14) ಆದಿತ್ಯವಾರದಂದು ಸ್ನ್ಯಾಪ್ಶಾಟ್ ವಿಜ್ವಲ್ ಮತ್ತು ಶೋಲಿನ್ ಸ್ಟುಡಿಯೋಸ್ ಇವರ ಸಂಗೀತ ಮಾಲಿಕತ್ವದಲ್ಲಿ ಕ್ಲಾಸಿಕ್ ಮೀಡಿಯಾ ಯುಟ್ಯೂಬ್ ಲೇಬಲ್ ಮೂಲಕ ಹಾಡು ಮೂಡಿ ಬಂದಿದೆ

ಹರಿಪ್ರಸಾದ್ ಹರಿತಾಸ್ ಇವರ ನಿರ್ಮಾಣದಲ್ಲಿ ಬಿಡುಗಡೆಗೊಂಡ ಈ ಹಾಡಿಗೆ ಯುವ ನಿರ್ದೇಶಕ ಅನೀಶ್ ಪೈ ಬಿ ನಿರ್ದೇಶಿಸಿದ್ದಾರೆ ಹಾಗೆ ಯುವ ಸಂಗೀತ ನಿರ್ದೇಶಕ ಸಾತ್ವಿಕ್ ಪಡಿಯಾರ್ ಹಾಗೂ ರಜಾಕ್ ಪುತ್ತೂರು ರವರ ಸಾಹಿತ್ಯದೊಂದಿಗೆ ಈ ಹಾಡು ಸೊಗಸಾಗಿ ಮೂಡಿಬಂದಿದೆ. ಈ ಹಾಡಿಗೆ ಕಿರಣ್ ಭಟ್ ಉಡುಪಿ ಶೀರ್ಷಿಕೆ ನೀಡಿ ರಾಹುಲ್ ವಸಿಷ್ಠ ಹಾಗೂ ಅಂಕಿತ ಅಚಾರ್ ಅವರು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸಾದ್ ಬಂಟ್ವಾಳ್ , ಸಾತ್ವಿಕ್ ನೆಲ್ಲಿತೀರ್ಥ, ಅಭಿಷೇಕ್ ಕೋಟ್ಯಾನ್ ಹಾಗೂ ಆದೇಶ ಪಳನೀರ್ ಸಹಕರಿಸಿದ್ದಾರೆ ಸುಶಾಂತ್ ಅಮೀನ್ ರವರು ಹಾಗೂ ಮಿಕ್ಸಿಂಗ್ ಮಾಸ್ಟರಿಂಗ್ ಅಲ್ಲಿ ಸಹಕರಿಸಿದ ನಿಖಿಲೇಶ್ ಭಟ್ಟ ಮುಡಾಜೆ ಸೇರಿ ಮಾಡಿರುವ ಈ ಹಾಡು ಈಗಾಗಲೇ ಪ್ರೇಕ್ಷಕರ ಮನಸೆಳೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಒಂದು ಹಾಡು ನಿಮ್ಮ ಪ್ರೀತಿಯ 15 ಧ್ವನಿಗಳು ಒಟ್ಟಾಗಿ ಈ ಹಾಡನ್ನು ಹಾಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಸಿಷ್ಠ ಸಿಂಹ, ಬಡೆಕಿಲ ಪ್ರದೀಪ್, ಚಂದನ ಅನಂತಕೃಷ್ಣ , ಡಾ ಅಭಿಷೇಕ ರಾವ್, ಅಖಿಲಾ ಪಜಿಮಣ್ಣು, ಅಪೇಕ್ಷ ಪೈ, ಕೀರ್ತನ್ ಹೊಳ್ಳ, ದಿವ್ಯ ರಾಮಚಂದ್ರ, ನಿಶಾನ್ ಎಂ ರೈ, ಅರ್ಪಸ್ ಉಳ್ಳಲ್, ಸಾಗರ್ ಚಂಡ್ಗಡ್ಕರ್, ನೀತು ಸುಬ್ರಮಣ್ಯ, ಕೀರ್ತನಾ, ನಿಖಿಲ್ ಹೆಗ್ಡೆ ಮತ್ತು ಸೌಂದರ್ಯ ಈ ೧೫ ಪ್ರತಿಭಾನ್ವಿತ ಹಾಗೂ ಹೆಸರಾಂತ ಗಾಯಕರು ಹಾಡಿಗೆ ಧ್ವನಿಗೂಡಿಸಿದ್ದಾರೆ.

ಈಗಾಗಲೇ 25 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಕರು ವೀಕ್ಷಿಸಿದ ಈ ಹಾಡಿಗೆ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://youtu.be/infREdhD29o
Link ????