Sunday, January 19, 2025
ಸುದ್ದಿ

ನಮ್ಮ ಯೋಧರ ತ್ಯಾಗ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಮೋದಿ- ಕಹಳೆ ನ್ಯೂಸ್

ನವದೆಹಲಿ, ಜೂನ್ 17: ನಮ್ಮ ಯೋಧರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಭಾರತವು ಶಾಂತಿಯನ್ನು ಎಂದಿಗೂ ಬಯಸುತ್ತದೆ, ಆದರೆ ಪ್ರಚೋದಿಸಿದಾಗ ಯಾವುದೇ ರೀತಿಯ ಪರಿಸ್ಥಿತಿ ಇರಲಿ, ಭಾರತವು ಸೂಕ್ತವಾದ ಉತ್ತರವನ್ನು ನೀಡಲು ಬದ್ಧವಾಗಿದೆ ಎಂದು ವಿವರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ 15 ಜಿಲ್ಲೆಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದರು. ಲಡಾಖ್‌ನ ಘರ್ಷಣೆಯಲ್ಲಿ ಹುತಾತ್ಮರಾದ 30 ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಸೈನಿಕರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತಿದ್ದೇನೆ. ನಮಗೆ ಐಕ್ಯತೆ ಹಾಗೂ ಸಾರ್ವಭೌಮತ್ವ ಮುಖ್ಯ ಹೌದು, ಆದರೆ ಪ್ರಚೋದಿಸಿದರೆ ಮಾತ್ರ ಎಲ್ಲವನ್ನೂ ಮರೆತು ತಕ್ಕ ಉತ್ತರ ನೀಡುತ್ತೇವೆ ಎಂದರು.

ಒಂದೆಡೆ ಚೀನಾವು ಭಾರತ ಸೇನೆಯೇ ಗಡಿಯನ್ನು ದಾಟಿ ನಿಯಮ ಉಲ್ಲಂಘಿಸಿ ತಮ್ಮ ಪ್ರದೇಶಕ್ಕೆ ಬಂದು ದಾಳಿ ಮಾಡಿದೆ ಎಂದು ಆರೋಪಿಸುತ್ತಿದೆ. ಇಷ್ಟೇ ಅಲ್ಲದೆ ಗಲ್ವಾನ್ ಕಣಿವೆ ಪ್ರದೇಶ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ವಾದಿಸುತ್ತಿದೆ.

ಈ ಹಿಂದೆಯೂ ಗಡಿ ವಿಚಾರವಾಗಿ ಎರಡೂ ಸೇನೆಯ ಕಮಾಂಡರ್‌ಗಳ ನಡುವೆ ಸಾಕಷ್ಟು ಬಾರಿ ಚರ್ಚೆಗಳು ನಡೆದಿದ್ದರೂ ಚೀನಾ ಖ್ಯಾತೆ ತೆಗೆದಿದೆ. ನಮಗೂ ಶಾಂತಿಯುತ ಪರಿಹಾರವೇ ಬೇಕು ಎಂದು ಬಾಯಲ್ಲಿ ಹೇಳುತ್ತಾ ನಿಯಮ ಉಲ್ಲಂಘಿಸುತ್ತಿದೆ.

ಜೂನ್ 15,16 ರಂದು ಚೀನಾ ಹಾಗೂ ಭಾರತದ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ 40 ಮಂದಿ ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತದ ಸೇನೆ ಹೇಳಿಕೆ ನೀಡಿದೆ. ಆದರೆ ನಮ್ಮವರೂ ಸತ್ತಿದ್ದಾರೆ ಎಂದಷ್ಟೇ ಹೇಳುತ್ತಿರುವ ಚೀನಾ, ಯಾವುದೇ ಮಾಹಿತಿ ನೀಡುತ್ತಿಲ್ಲ.